Fri. Dec 27th, 2024

ನೀವೇ ತಿರಸ್ಕರಿಸಿದ ಸುಧಾಕರ್ ಸ್ಪರ್ಧೆ: ಈಗ ಸೋಲಿಸಿದರೆ ಮತಕ್ಕೆ ಹೆಚ್ಚು ಗೌರವ-ಸಿದ್ದು

Share this with Friends

ಚಿಕ್ಕಬಳ್ಳಾಪುರ, ಏ.18: ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಮತಗಳಿಂದ ರಕ್ಷಾ ರಾಮಯ್ಯ ಗೆಲ್ಲುತ್ತಾರೆ ಎಂದು ಸಿ.ಎಂ.ಸಿದ್ದರಾಮಯ್ಯ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬೃಹತ್ ರೋಡ್ ಶೋ ವೇಳೆ ಮಾತನಾಡಿದ ಸಿಎಂ,
ನೀವೇ ತಿರಸ್ಕರಿಸಿದ ಎನ್ ಡಿ ಎ ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ. ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ ಬರುತ್ತದೆ ಎಂದು ತಿಳಿಸಿದರು.

ಭ್ರಷ್ಟಾಚಾರಿ ಎಂಬ ಕಾರಣಕ್ಕಾಗಿ ಸುಧಾಕರ್ ಅವರನ್ನು ಸೋಲಿಸಿದ್ದೀರಿ, ಇವರ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಯುತ್ತಿದೆ, ತನಿಖೆಯಲ್ಲಿ ಇವರ ಭ್ರಷ್ಟಾಚಾರ ಸಾಬೀತಾಗುತ್ತದೆ ಬಳಿಕ ಸುಧಾಕರ್ ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗ್ತಾರೆ ಎಂದು ಮಾರ್ಮಿಕವಾಗಿ ಸಿದ್ದು ನುಡಿದರು.

ಸುಧಾಕರ್ ಅವರಿಗೆ ಜನತಾ ನ್ಯಾಯಾಲಯದಲ್ಲಿ ನೀವೂ ಶಿಕ್ಷೆ ಕೊಡಬೇಕು. ಶಿಕ್ಷೆ ಕೊಟ್ಟರೆ ಮಾತ್ರ ಕ್ಷೇತ್ರದ ಜನತೆಯ ಹೆಸರಿನಲ್ಲಿ ಮಾಡಿದ ಮೋಸಕ್ಕೆ ಮತ್ತು ಮಂತ್ರಿಯಾಗಿ ಮಾಡಿದ ಭ್ರಷ್ಟಾಚಾರಕ್ಕೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಕೆಟ್ಟ ನೀತಿಯಿಂದಾಗಿ ಹದಗೆಟ್ಟಿರುವ ಭಾರತದ ಆರ್ಥಿಕತೆಯನ್ನು ಸರಿ ದಾರಿಗೆ ತಂದು ಜನರ ಪರವಾದ ಆರ್ಥಿಕಯನ್ನು ಪುನರ್ ಸ್ಥಾಪಿಸಲಾಗುವುದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.


Share this with Friends

Related Post