Tue. Dec 24th, 2024

ಚಿನ್ಮಯ ಮಿಶನ್ ವತಿಯಿಂದ ಮಕ್ಕಳಿಗೆ ಬೇಸಿಗೆ‌ ಶಿಬಿರ

Share this with Friends

ಮೈಸೂರು, ಏ.4:‌ ಮೈಸೂರಿನ ಚಿನ್ಮಯ ಮಿಶನ್ ವತಿಯಿಂದ ಮಕ್ಕಳಿಗೆ ಏಪ್ರಿಲ್
18 ರಿಂದ 28 ವರೆಗೆ ಬೇಸಿಗೆ‌ ಶಿಬಿರ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ಇರಲಿದೆ‌, ಶುಲ್ಕ‌ 750ರೂ‌ ಇದ್ದು 10 ರಿಂದ 15‌ ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ ಎಂದು ‌ಚಿನ್ಮಯ ಮಿಶನ್ ನವರು ತಿಳಿಸಿದ್ದಾರೆ.

ಶಿಬಿರದ ಮುಖ್ಯಾಂಶಗಳೆಂದರೆ,
11 ದಿನಗಳ ವಿನೋದ, ಕಲಿಕೆ ಮತ್ತು ನಗು, ಒಳಾಂಗಣ ಆಟಗಳು, ವೇದ ಪಠಣ, ಗೀತಾ ಪಠಣ, ಶ್ಲೋಕಗಳು ಮತ್ತು ಭಜನೆಗಳು, ಕಥೆಗಳು ಮತ್ತು ಚಟುವಟಿಕೆಗಳು, ರಸಪ್ರಶ್ನೆ ಮತ್ತಿತರ‌ ಚಟುವಟಿಕೆಗಳನ್ನು ಹೇಳಿಕೊಡಲಾಗುವುದು.

ಚಿನ್ಮಯ ಮಿಷನ್, ದತ್ತ ಸನ್ನಿಧಿ, ಗೋಕುಲಂ
ಚಿನ್ಮಯ ಮಿಷನ್, ಶ್ರೀ ರಾಮಕ್ಷೇತ್ರ, ವಿದ್ಯಾರಣ್ಯಪುರಂ‌ ಇಲ್ಲಿ ಬೇಸಿಗೆ‌ ಶಿಬಿರ ನಡೆಯಲಿದ್ದು,ಹೆಸರು ನೋಂದಣಿಗಾಗಿ ಮೊಬೈಲ್ ಸಂಖ್ಯೆ
7090150222/9141796370 ಹಾಗೂ
9448958974 ರಲ್ಲಿ ಸಂಪರ್ಕಿಸಬಹುದಾಗಿದೆ.


Share this with Friends

Related Post