Sat. Jan 4th, 2025

ಯಧುವೀರ್ ಪರ ಕೆ.ಆರ್.ಕ್ಷೇತ್ರದಲ್ಲಿ ಟಿ.ಎಸ್. ಶ್ರೀವತ್ಸ ಬಿರುಸಿನ ಪ್ರಚಾರ

Share this with Friends

ಮೈಸೂರು, ಏ.13: ಮೈಸೂರು, ಕೊಡಗು ಎನ್‌ ಡಿ ಎ ಅಭ್ಯರ್ಥಿ ಯದುವೀರ್ ಪರ ಶಾಸಕ ಟಿಎಸ್. ಶ್ರೀವತ್ಸ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿ ಮತಯಾಚನೆ ಮಾಡಿದರು.

ಈ ವೇಳೆ ಟಿಎಸ್. ಶ್ರೀವತ್ಸ ಮಾತನಾಡಿ ದೇಶಕ್ಕಾಗಿ ಮೋದಿ, ಮೈಸೂರಿಗೆ ಯದುವೀರ್ ಎಂಬ ಘೋಷಣೆ ಸಾಮನ್ಯ ನಾಗರೀಕರಲ್ಲಿ ಕೇಳಿಬರುತ್ತಿರುವುದು ಸಂತಸ ತರುತ್ತಿದೆ ಎಂದು ಹೇಳಿದರು.

ಭಾನುವಾರ ಸಂಜೆ ಪ್ರಧಾನಿ ಮೋದಿ ರವರು ಮಹರಾಜ ಕಾಲೇಜು ಮೈದಾನದಲ್ಲಿ ಭಾಷಣ ಮಾಡಲಿದ್ದಾರೆ ಜನಸಾಮನ್ಯರು ಆಗಮಿಸಬಹುದು ಎಂದು ಆಹ್ವಾನಿಸಿದರು.

ಹಳೇ ಮೈಸೂರು ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ,ಕಾರ್ಖಾನೆ, ಅಣೆಕಟ್ಟು, ಸಂಸ್ಕೃತಿ, ಕಲೆ ಸಾಹಿತ್ಯ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿ ಪಡಿಸಿದ ಯಧುಕುಲದ ಕುಡಿ ಬಿಜೆಪಿ ಅಭ್ಯರ್ಥಿಯಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೃಷ್ಣರಾಜ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಮುನ್ನಡೆ ನೀಡಿ ಜಯಗಳಿಸಿಕೊಡಬೇಕೆಂದು ಮತದಾರರಲ್ಲಿ ಶ್ರೀವತ್ಸ ಮನವಿ ಮಾಡಿದರು.

ವಿಶ್ವೇಶ್ವರಯ್ಯ,ನಾಗರಾಜ್ ಬಿಲ್ಲಯ್ಯ, ಕೃಷ್ಣ, ರವಿ, ಅರುಣ್, ಸೋಮು ,ದೀಪು, ಕೃಷ್ಣ, ಸುಂದರ್, ಅಜಯ್ ಶಾಸ್ತ್ರಿ, ಜೋಗಿ ಮಂಜು, ಓಂ ಶ್ರೀನಿವಾಸ್, ಪ್ರಹ್ಲಾದ್, ಬಸವರಾಜ್, ಮಮತ, ಮುರುಳಿ, ಮಧು, ರಾಜಗೋಪಾಲ್,ಚಂದ್ರಪ್ಪ,ಕಿಶೋರ್, ಪ್ರದೀಪ್, ರಘು, ಮಂಜುನಾಥ್ ಮತ್ತಿತರರು ಪ್ರಚಾರದಲ್ಲಿ ಸಾಥ್ ನೀಡಿದರು.


Share this with Friends

Related Post