Mon. Dec 23rd, 2024

‘ಕಿರಾತಕ’ ಚಿತ್ರದಲ್ಲಿ ನಟಿಸಿದ್ದ ತಮಿಳು ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

Daniel Balaji
Share this with Friends

ಚೆನ್ನೈ.ಮಾ.30: ನಟ ಯಶ್ ಅಭಿನಯದ ‘ಕಿರಾತಕ’ ಸಿನಿಮಾದಲ್ಲಿ ನಟಿಸಿದ್ದ ತಮಿಳು ನಟ ಡೇನಿಯಲ್ ಬಾಲಾಜಿ(48) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.

ಬಾಲಾಜಿಗೆ 48 ವರ್ಷ ವಯಸ್ಸಾಗಿತ್ತು. ಇದ್ದಕ್ಕಿದ್ದ ಹಾಗೆ ಬಾಲಾಜಿ ಅವರು ನಿಧನರಾಗಿರೋದು ಅವರ ಕುಟುಂಬಸ್ಥರು, ಆತ್ಮೀಯರು ಸೇರಿ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ.ಬಾಲಾಜಿ ಅವರ ಪಾರ್ಥಿವ ಶರೀರವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಗಿದೆ.ಇಂದು ಅವರ ಅಂತ್ಯಕ್ರಿಯೆ ನಡೆಯಲಿದ್ದು ಚಿತ್ರರಂಗದವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ನಟ ಡ್ಯಾನಿಯಲ್​ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರಾಗಿದ್ದು, ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಕಿಂಗ್​ ಸ್ಟಾರ್​ ಯಶ್ ನಟನೆಯ ಕಿರಾತಕ​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಡ್ಯಾನಿಯಲ್​ ಬಾಲಾಜಿ ಕನ್ನಡದಲ್ಲಿ ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್​ವರ್ಲ್ಡ್​​​ ಹಾಗೂ ಡವ್​ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರಿಯರಿಗೂ ಕೂಡ ಚಿರಪರಿಚಿತರಾಗಿದ್ದರು.

ಬಾಲಾಜಿ ಅವರು ಕಮಲ್ ಹಾಸನ್‌ರ ತೆರೆ ಕಾಣದ ‘ಮರುದುನಯಗಂ’ ಸಿನಿಮಾದಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ‘ಚಿತ್ತಿ’ ಎನ್ನುವ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ರಾಧಿಕಾ ಶರತ್‌ಕುಮಾರ್ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದರು. ಧಾರಾವಾಹಿಯಲ್ಲಿ ಬಾಲಾಜಿ ಅವರು ಡೇನಿಯಲ್ ಎನ್ನುವ ಪಾತ್ರ ಮಾಡಿದ್ದರು. ಇದರಿಂದಲೇ ಅವರಿಗೆ ಡೇನಿಯಲ್ ಎಂಬ ಸ್ಕ್ರೀನ್ ಹೆಸರು ಬಂದಿತ್ತು.

‘ಏಪ್ರಿಲ್ ಮಧತ್ತಿಲ್’ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದರು. ಸೂರ್ಯ, ಜ್ಯೋತಿಕಾರ ಕಾಖ ಕಾಖ‘ ಸಿನಿಮಾವು ಬಾಲಾಜಿಗೆ ಜನಪ್ರಿಯತೆ ನೀಡಿತ್ತು. ವೆಟ್ರಿ ಮಾರನ್ ಅವರ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ದಳಪತಿ ವಿಜಯ್, ಅಜಿತ್, ಸಿಂಬು ಅವರ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ಕೊನೆಯದಾಗಿ ಅವರಯ ‘ಅರಿಯಾವನ್’ ಚಿತ್ರ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲೂ ನಟಿಸಿದ್ದರು. ನಟಿಸಿದ್ದರು.


Share this with Friends

Related Post