Mon. Dec 23rd, 2024

ಈಚನೂರು ಕುಮಾರ್ ನಿಧನಕ್ಕೆ ತೇಜಸ್ವಿ ನಾಗಲಿಂಗ ಸ್ವಾಮಿ ಸಂತಾಪ

Share this with Friends

ಮೈಸೂರು, ಜು.21: ಮೈಸೂರು ಜಿಲ್ಲೆಯ ಖ್ಯಾತ ಸಾಹಿತಿ,ಪತ್ರಕರ್ತರಾದ ಈಚನೂರು ಕುಮಾರ್ ನಿಧನಕ್ಕೆ ತೇಜಸ್ವಿ ನಾಗಲಿಂಗ ಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಈಚನೂರು ಕುಮಾ‌ರ್ ಅವರ ನಿಧನ ಪತ್ರಿಕಾರಂಗಕ್ಕೆ
ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಈಚನೂರು ಕುಮಾರ್ ಅವರು ಭಾರತ ಸಂವಿಧಾನ ಕುರಿತು ವಿಶೇಷ
ಲೇಖನಗಳು ರಚಿಸಿದ್ದಾರೆ, ಇವರು ಪ್ರಜಾವಾಣಿ,ನವಧ್ವನಿ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂ‌ರ್, ಕನ್ನಡ ಪ್ರಭ, ಮಹಾನಂದಿ,ಮೈಸೂರು ಪತ್ರಿಕೆ, ಪ್ರಜಾನುಡಿ, ಡೆಕ್ಕನ್ ನ್ಯೂಸ್ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು.

ಅಲ್ಲದೆ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ
ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು,ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಪ್ರಶಂಸನೀಯ ವಾದುದು.

ಮೈಸೂರು ರಾಜಮನೆತನದ ಇತಿಹಾಸವನ್ನು ಜನತೆಗೆ ತಿಳಿಸಿದ ಕೀರ್ತಿ ಈಚನೂರು ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ತೇಜಸ್ವಿ ಬಣ್ಣಿಸಿದ್ದಾರೆ.

ಇತಿಹಾಸಕಾರರಾದ ಈಚನೂರು
ಕುಮಾರ್‌ ಅವರ ನಿಧನದಿಂದ ಅವರ ಕುಟುಂಬದವರು, ಅಭಿಮಾನಿಗಳಿಗೆ
ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು
ಭಗವಂತನ್ನು ದಯಪಾಲಿಸಲೆಂದು
ಪ್ರಾರ್ಥಿಸುತ್ತೇನೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ


Share this with Friends

Related Post