Mon. Dec 23rd, 2024

ರಾಜ್ಯದಲ್ಲಿ ಹೆಚ್ಚುತ್ತಿದೆ ಬಿಸಿಲಿನ ತಾಪ, ಎಚ್ಚರಿಕೆಯಿಂದಿರಲು ಮುನ್ಸೂಚನೆ

Temperatures
Share this with Friends

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಸಿಲು ಹೆಚ್ಚಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ ಹೆಚ್ಚಾಗಲಿದೆ. ಅಲ್ಲದೇ, 2 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರದಲ್ಲಿ 13.2 ರಷ್ಟು ಡಿಗ್ರಿ ಸೆಲ್ಸಿಯಸ್ ಇದ್ದು, ಅತ್ಯಂತ ಕನಿಷ್ಠ ಉಷ್ಣಾಂಶ ಇರುವ ನಗರವಾಗಲಿದೆ. ಕಾರವಾರದಲ್ಲಿ ಗರಿಷ್ಠ 37 ಡಿಗ್ರಿ ಹಾಗೂ ಕನಿಷ್ಠ 21 ಡಿಗ್ರಿ ಕನಿಷ್ಠ ಉಷ್ಣಾಂಶ ಇರಲಿದ್ದು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತೀ ಹೆಚ್ಚು ಉಷ್ಣಾಂಶ ಇರಲಿದೆ. ರಾಯಚೂರು, ಶಿವಮೊಗ್ಗದಲ್ಲಿ 35 ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು: 33-17, ಮಂಗಳೂರು: 33-23, ಬೆಳಗಾವಿ: 33-21, ಬೀದರ್: 34-20, ವಿಜಯಪುರ: 35-18, ಬಾಗಲಕೋಟೆ: 35-19, ಹೊನ್ನಾವರ: 33-19, ಕಾರವಾರ: 37-21, ಧಾರವಾಡ: 35-18, ಹಾವೇರಿ: 34-17, ರಾಯಚೂರು: 36-20, ಚಿಕ್ಕಮಗಳೂರು: 30-13, ಚಿತ್ರದುರ್ಗದಲ್ಲಿ: 35-18, ದಾವಣಗೆರೆ: 35-15, ಚಿಂತಾಮಣಿ: 34-13, ಮೈಸೂರು: 33. ಶಿವಮೊಗ್ಗ: 36-16 ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗಾವಿಯಲ್ಲಿ 35 ಡಿಗ್ರಿ :
ವಾರದ ಅವಧಿಯಲ್ಲಿ ಬಿಸಿಲಿನ ಝಳ ಹೆಚ್ಚಳದಿಂದ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ.ಬೆಳಗಾವಿ ಜಿಲ್ಲೆಯ ಬಹುಭಾಗ ತಂಪಾದ ಹವಾಮಾನದಿಂದಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಆಹ್ಲಾದಕರ ವಾತಾವರಣದ ಹಿನ್ನೆಲೆಯಲ್ಲಿಇತರ ಜಿಲ್ಲೆಗಳಿಂದ ಉದ್ಯೋಗದ ನಿಮಿತ್ತ ಬೆಳಗಾವಿಗೆ ಬಂದವರು ಇಲ್ಲೇ ನೆಲೆಯೂರಲು ಬಯಸುತ್ತಾರೆ. ಆದರೆ, ಪ್ರಸಕ್ತ ವರ್ಷ ಹವಾಮಾನ ಬದಲಾವಣೆ ಬೆಳಗಾವಿಗರಲ್ಲಿಆತಂಕ ಹುಟ್ಟಿಸುವಂತಿದೆ. ಸಾಮಾನ್ಯವಾಗಿ ಬೆಳಗಾವಿಯಲ್ಲಿ ಬೇಸಿಗೆ ಆರಂಭದ ಅವಧಿಯಾದ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 30-32 ಡಿಗ್ರಿ ಇರುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ ಮೊದಲ ವಾರದಲ್ಲೇ ಗರಿಷ್ಠ ಉಷ್ಣಾಂಶ 35 ಡಿಗ್ರಿ ದಾಟಿದೆ.

BREAKING : ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹರಾವ್ ಮತ್ತು ಎಂ. ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ


Share this with Friends

Related Post