Sat. Mar 7th, 2026

ನೆಲಮಂಗಲ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಣೆ

Share this with Friends

ಬೆಂಗಳೂರು:ಪ್ರಯಾಣಿಕರ ಅನುಕೂಲಕ್ಕಾಗಿ, ರೈಲು ಸಂಖ್ಯೆ 11311/11312 ಸೋಲಾಪುರ–ಹಾಸನ–ಸೋಲಾಪುರ ದೈನಂದಿನ ಎಕ್ಸ್ ಪ್ರೆಸ್ ರೈಲಿಗೆ ನೆಲಮಂಗಲ ನಿಲ್ದಾಣದಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯ ಅವಧಿಯನ್ನು ಜೂನ್ 16, 2026 ರವರೆಗೆ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 11311 ಸೋಲಾಪುರ–ಹಾಸನ ಎಕ್ಸ್ ಪ್ರೆಸ್  16.12.2025 ರಿಂದ 15.06.2026 ರವರೆಗೆ ಬೆಳಿಗ್ಗೆ 07.39/07.40 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ ಹಾಗೂ ರೈಲು ಸಂಖ್ಯೆ 11312 ಹಾಸನ–ಸೋಲಾಪುರ ಎಕ್ಸ್ ಪ್ರೆಸ್  17.12.2025 ರಿಂದ 16.06.2026 ರವರೆಗೆ ಸಂಜೆ 05:59/06:01 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು‌ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಚಿಕ್ಕಬಾಣಾವರ ನಿಲ್ದಾಣದಲ್ಲಿ ರೈಲು ನಿಲುಗಡೆ ಅವಧಿ ವಿಸ್ತರಣೆ:

ಯಶವಂತಪುರ ಮತ್ತು ಶಿವಮೊಗ್ಗ ಟೌನ್ ನಡುವೆ ಪ್ರತಿದಿನ ಸಂಚರಿಸುವ ಇಂಟರ್’ಸಿಟಿ ಎಕ್ಸ್ ಪ್ರೆಸ್  (ರೈಲು ಸಂಖ್ಯೆ 16579/16580 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ) ರೈಲಿಗೆ ಚಿಕ್ಕಬಾಣಾವರ ನಿಲ್ದಾಣದಲ್ಲಿ ನೀಡಲಾಗಿದ್ದ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆಯ ಅವಧಿಯನ್ನು ವಿಸ್ತರಿಸಿದೆ. ಈ ವಿಸ್ತರಣೆಯು ಡಿಸೆಂಬರ್ 16, 2025 ರಿಂದ ಮಾರ್ಚ್ 31, 2026 ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.


Share this with Friends

Related Post