Thu. Dec 26th, 2024

ಹಣತೆ ಬೆಳಗುವ ಮೂಲಕಶ್ರೀಕಂಠೇಶ್ವರನ ಭಕ್ತರಿಗೆ ಮತದಾನ ಅರಿವು

Share this with Friends

ಮೈಸೂರು ಏ.21: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಬೃಹತ್ ರಂಗೊಲಿ ಬಿಡಿಸಿ ಹಣತೆ,ಕ್ಯಾಂಡಲ್ ಬೆಳಗುವ ಮೂಲಕ ಭಕ್ತರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.

ನಂಜನಗೂಡು ತಾಲ್ಲೂಕು ಪಂಚಾಯಿತಿ, ಸ್ವೀಪ್ ಸಮಿತಿಯ ನೇತೃತ್ವದಲ್ಲಿ ಎನ್ ಆರ್ ಎಲ್ ಎಂ ಸಂಘದ ಮಹಿಳೆಯರು ದೇಗುಲದ ಮುಂಭಾಗ ರಂಗೋಲಿಯಲ್ಲಿ ಬಿಡಿಸಿದ ಇ.ವಿ.ಎಂ ಯಂತ್ರ, ತೋರು ಬೆರಳಿಗೆ ಶಾಹಿ ಗುರುತು,ಮತದಾನ ಕುರಿತ ಘೋಷವಾಕ್ಯಗಳು ಭಕ್ತರ ಗಮನ ಸೆಳೆಯಿತು.

ರಂಗೋಲಿ ಸುತ್ತ ಮಣ್ಣಿನ ಹಣತೆ, ಕ್ಯಾಂಡಲ್ ಬೆಳಗಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಜಗನಾಥ್ ಮೂರ್ತಿ, ಸದೃಢ ಸಮಾಜ ನಿರ್ಮಿಸಲು ಪ್ರತಿಯೊಬ್ಬರ ಮತವು ಅತ್ಯಗತ್ಯ. ಸಂವಿಧಾನಿಕ ಮತದಾನದ ಹಕ್ಕನ್ನು ಯಾರೊಬ್ಬರೂ ಬಿಟ್ಟುಕೊಡಬಾರದು ಎಂದು ಸಲಹೆ ನೀಡಿದರು.

ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಮಾತನಾಡಿ, ಚುನಾವಣೆಯು ಒಂದು ಹಬ್ಬವಿದ್ದಂತೆ, ಪ್ರತಿಯೊಬ್ಬರು ಹಕ್ಕು ಚಲಾಯಿಸಲು‌ ಉತ್ಸುಕತೆ ತೋರಬೇಕು ಎಂದು‌ ಕರೆ ನೀಡಿದರು.

ಇದೇ ವೇಳೆ ನೂರಾರು ಭಕ್ತರಿಗೆ ಮತದಾನ‌ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.


Share this with Friends

Related Post