Thu. Jan 9th, 2025

ಪತ್ನಿ ಕೊಲೆಗೆ ಯತ್ನಿಸಿ ಪರಾರಿಯಾದ ಪತಿ

Share this with Friends

ಮೈಸೂರು,ಏ15: ಪರಪುರುಷನೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿದ್ದಿ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿ ಕೊನೆಗೆ
ಆಕೆಯನ್ನು ಕೊಲ್ಲಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ತೀವ್ರ ಹಲ್ಲೆಗೊಳಗಾದ ಪತ್ನಿ ಸುಮಾ ಈಗ ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪತ್ನಿಯನಯ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪತಿ ಕೃಷ್ಣ ಎಲ್ಲೋ ಓಡಿಹೋಗಿದ್ದಾನೆ.

ಸುಮ ಹಾಗೂ ಕೃಷ್ಣ ಪ್ರೀತಿಸಿ ಮದುವೆ ಆಗಿದ್ದು ಇಬ್ಬರು ಮಕ್ಕಳಿವೆ.ಕುಡಿತದ ಚಟ ಅಂಟಿಸಿಕೊಂಡ ಕೃಷ್ಣ ಸದಾ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ.

ಇದೇ ವಿಚಾರವಾಗಿ ಕಳೆದ ವರ್ಷ ಜಗಳ ಮಾಡಿ ಪತ್ನಿಗೆ ಮೊಚ್ಚಿನಿಂದ ಹಲ್ಲೆ ನಡೆಸಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಆದರೂ ಕೃಷ್ಣ ಮತ್ತೆ ಹಳೇ ಚಾಳಿ ಮುಂದುವರಿಸಿ ಕಿರುಕುಳ ನೀಡುತ್ತಿದ್ದ.ಪತಿಯ ವರ್ತನೆಗೆ ಬೇಸತ್ತ ಸುಮಾ ತವರು ಮನೆ ಸೇರಿದ್ದರು.ನಂತರ ತವರಿಗೆ ಬಂದು ತನ್ನ ಜೊತೆ ಮನೆಗೆ ಬರುವಂತೆ ಪೀಡಿಸುತ್ತಿದ್ದ.

ಜೀವನೋಪಾಯಕ್ಕಾಗಿ ಸುಮಾ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಸುಮಾರನ್ನ ಕರೆದೊಯ್ದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೆ ಯತ್ನಿಸಿದ್ದಾನೆ.

ತೀವ್ರ ಗಾಯಗೊಂಡ ಸುಮಾರ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಳಿಯ ಕೃಷ್ಣನಿಂದ ಮಗಳಿಗೆ ರಕ್ಷಣೆ ಬೇಕೆಂದು ಸುಮಾ ತಾಯಿ ಸುನಂದ ಪೊಲೀಸರಲ್ಲಿಮನವಿ ಮಾಡಿದ್ದಾರೆ.

ಮೇಟಗಳ್ಳಿ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿ ಕೃಷ್ಣನ ಬಂಧನಕ್ಕೆ ಬಲೆ ಬೀಸಿದ್ದಾರೆ.


Share this with Friends

Related Post