ಮೈಸೂರು, ಫೆ.7: ಸಾಲ ತೀರಿಸಲು ಹಣ ನೀಡದ ಪತ್ನಿಯನ್ನೇ ಪತಿ ಕೊಂದಿರುವ ಹೇಯ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.
ಪತಿ ಅಕ್ಬರ್ ಆಲಿ ನವೀದಾಬಿಯನ್ನು ಕೊಂದ ಆರೋಪಿ
ಮಂಡ್ಯ ಜಿಲ್ಲೆಯ ಅಕ್ಬರ್ ಆಲಿಯನ್ನ ನವೀದಾಬಿ 13 ವರ್ಷಗಳ ಹಿಂದೆ ವಿವಾಹವಾಗಿದ್ದು,ಮೈಸೂರಿನ ರಾಜೀವ್ ನಗರದಲ್ಲಿ ಮೂರು ಮಕ್ಕಳೊಂದಿಗೆ
ಚೆನ್ನಾಗಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದರು .
ಮಂಡ್ಯಾದಲ್ಲಿ ಆಟೋ ಚಾಲಕನಾಗಿದ್ದ ಅಕ್ಬರ್ ಆಲಿಗೆ ಹೃದಯಾಘಾತವಾದ ಹಿನ್ನಲೆ ಪತ್ನಿ ಮನೆಯವರು ಚಿಕಿತ್ಸೆ ಕೊಡಿಸಿದ್ದರು.
ನಂತರ ಗೂಡ್ಸ್ ಆಟೋ, ಪ್ರಾವಿಷನ್ ಸ್ಟೋರ್ಸ್, ಆಟೋ ಮೊಬೈಲ್ಸ್ ಅಂಗಡಿ ಹೀಗೆ ವಿವಿಧ ವ್ಯಾಪಾರ ಮಾಡಲು ಅಕ್ಬರ್ ಆಲಿಗೆ ಪತ್ನಿ ನವೀದಾ ಬಿ ಮನೆಯವರು ಆರ್ಥಿಕ ಸಹಾಯ ಮಾಡಿದ್ದರು.
ಎಲ್ಲಾ ಬಂಡವಾಳವನ್ನ ಹಾಳುಮಾಡಿಕೊಂಡ ಅಕ್ಬರ್ ಆಲಿ ಇನ್ನಷ್ಟು ಸಾಲ ಮಾಡಿದ್ದ.
ನಂತರ ಸಾಲ ತೀರಿಸುವಂತೆ ಪತ್ನಿಗೆ ದುಂಬಾಲು ಬಿದ್ದ, ನವೀದಾ ಬಿ ತಾನು ನಡೆಸುತ್ತಿದ್ದ ಪುಟ್ಟ ಅಂಗಡಿಯಿಂದ ಗಂಡನ ಸಾಲ ತೀರಿಸುತ್ತಿದ್ದರು.
ಆದರೆ ಪತಿಯ ಸಾಲದ ಹೊರೆ ತೀರಲೇ ಇಲ್ಲ. ಮತ್ತೆ, ಸಾಲ ಮಾಡುತ್ತಿದ್ದ ಪತಿ ಜೊತೆ ಪತ್ನಿ ಆಗಾಗ ಜಗಳ ಮಾಡಿ ಬುದ್ದಿ ಹೇಳಿದ್ದರು.
ಇದೇ ವಿಚಾರದಲ್ಲಿ ಮತ್ತೆ ಜಗಳ ಆಗಿದೆ,ಅದೆ ದಿನ ನವೀದಾ ಬೀ ನಾಪತ್ತೆಯಾದರು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.
ಅಕ್ಬರ್ ಆಲಿಯನ್ನ ಪ್ರಶ್ನಿಸಿದಾಗ ತಂದೆ ಮನೆಗೆ ಹೋಗಿದ್ದಾಳೆ. ಅಂಗಡಿಯಲ್ಲಿ ಇದ್ದಾಳೆ ಎಂದು ಏನೇನೊ ಹೇಳುತ್ತಿದ್ದ.
ಅಕ್ಕಪಕ್ಕದ ಮನೆಯವರನ್ನ ಕೇಳಿದಾಗ ಇಬ್ಬರ ಜಗಳವಾಡಿದ ವಿಚಾರ ತಿಳಿಸಿದ್ದಾರೆ.
ಅನುಮಾನಗೊಂಡು ಬೀಗ ಹಾಕಿದ್ದ ಮನೆ ಬಾಗಿಲನ್ನ ಒಡೆದು ನೋಡಿದಾಗ ನವೀದಾ ಬೀ ಅಸ್ವಸ್ಥರಾಗಿ ಕುಳಿತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ,ಕುತ್ತಿಗೆ ಮೇಲೆ ಗಾಯದ ಗುರುತು ಕಂಡು ಬಂದಿದೆ.
ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು , ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಕ್ಬರ್ ಆಲಿಯನ್ನ ಬಂಧಿಸಿದ್ದಾರೆ.