Tue. Dec 24th, 2024

ಮೃತ ಮಗುವನ್ನು ಹೊಸ್ತಿಲ ಬಳಿ ಇಟ್ಟು ತಾಯಿ ಪರಾರಿ

Share this with Friends

ವಿಜಯಪುರ,ಜೂ. 22: ಮೃತ ನವಜಾತ ಮಗುವನ್ನು ಮನೆಯೊಂದರ ಹೊಸ್ತಿಲ ಬಳಿ ಇಟ್ಟು ಮಹಾತಾಯಿ ಪರಾರಿಯಾಗಿರುವ ಹೇಯ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯನಗರದ ಚಾಲುಕ್ಯ ನಗರದಲ್ಲಿರುವ
ರಾಮಕೃಷ್ಣ ಆಸ್ಪತ್ರೆಯ ಹಿಂಬದಿ ರಸ್ತೆ ಯಲ್ಲಿರುವ ಮನೆಯೊಂದರ ಹೊಸ್ತಿಲಲ್ಲಿ ಮೃತ ಗಂಡು ಮಗುವನ್ನು ಇಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಕ್ಲಿಪ್ ಕೂಡಾ ಮಗುವಿನಲ್ಲಿ ಹಾಗೇ ಇತ್ತು, ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಇದ್ದು ಅನಾರೋಗ್ಯ ಕಾರಣದಿಂದಾಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಅದು ಏನೇ ಆಗಿರಲಿ ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಜೋಪಾನ ಮಾಡಿರಲಿಲ್ಲವೆ,ಸತ್ತ ತಕ್ಷಣ ನಿರ್ದಯ ವಾಗಿ ಎಸೆದು ಹೋಗುವುದು ಎಷ್ಟು ಸರಿ ಅದು ಹೇಗೆ ಮನಸು ಬಂತು ಎಂದು ಸ್ಥಳೀಯ ನಿವಾಸಿಗಳು ಮಗುವಿನ ಮನೆಯವರಿಗೆ ಹಿಡಿಶಾಪ ಹಾಕಿದ್ದಾರೆ.

ಮಗುವನ್ನು ಇಟ್ಟು ಹೋಗಿದ್ದ ಮನೆಯಲ್ಲಿ ವಿದ್ಯಾರ್ಥಿನಿಯರು ಬಾಡಿಗೆಗೆ ಇದ್ದು ಇಂದು ಬೆಳಿಗ್ಗೆ ಎಂದಿನಂತೆ ಬಾಗಿಲು ತೆಗೆದಾಗ ಮಗುವನ್ನು ಕಂಡು ಗಾಬರಿಯಾಗಿದ್ದಾರೆ.

ತಕ್ಚಣ ಈ ಬಗ್ಗೆ ಪೊಲೀಸರಿಗೆ ವಿದ್ಯಾರ್ಥಿನಿಯರು ತಿಳಿಸಿದ್ದಾರೆ,ಸ್ಥಳಕ್ಕೆ ಭೇಟಿ ನೀಡಿದ ಆದರ್ಶ ನಗರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post