Sat. Dec 28th, 2024

ಲಾಡ್ಜ್ ನಲ್ಲಿ ಮಗನನ್ನ ಬಿಟ್ಟು ಹೋಗಿದ್ದ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

Share this with Friends

ಮೈಸೂರು,ಏ.17: ಮೈಸೂರಿನ ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟ ಮಹಿಳೆ ಮಧ್ಯರಾತ್ರಿ ಧಢೀರ್ ನಾಪತ್ತೆಯಾದ ಘಟನೆ ನಡೆದಿದ್ದು ಈ‌ ರೀತಿ ತಾಯಂದಿರು ಇರುತ್ತಾರಾ ಅನ್ನಿಸಿದೆ.

ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಬಾಲಕನನ್ನ ಲಷ್ಜರ್ ಠಾಣೆ ಪೊಲೀಸರು ರಕ್ಷಿಸಿದ್ದಾರೆ.

ಆದರೆ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮಹಿಳೆಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ಮೂಲದ ಭಾರ್ಗವಿ ಮಗನನ್ನ ಲಾಡ್ಜ್ ನಲ್ಲಿ ಬಿಟ್ಟು ಹೋಗಿದ್ದಳು.ಎರಡು ದಿನಗಳ ಹಿಂದೆ ಭಾರ್ಗವಿ ತನ್ನ ಮಗ ಶಶಾಂಕ್ ಜೊತೆ ಮೈಸೂರಿಗೆ ಬಂದು ವೈಶಾಖ್ ಹೋಟೆಲ್ ನಲ್ಲಿ ತಂಗಿದ್ದರು.

ಇಂದು ಬೆಳಿಗ್ಗೆ ಚೆಕ್ ಔಟ್ ಇದ್ದ ಕಾರಣ ವ್ಯವಸ್ಥಾಪಕ ಅರುಣ್ ಕುಮಾರ್ ಕೊಠಡಿಗೆ ಬಂದಾಗ ಶಶಾಂಕ್ ಒಬ್ಬನೇ ಇರುವುದು ಗೊತ್ತಾಗಿದೆ.

ತಾಯಿ ಹೊರಗೆ ಹೋಗಿರುವ ಬಗ್ಗೆ ಬಾಲಕನಿಗೆ ಮಾಹಿತಿ ಇಲ್ಲದ ಕಾರಣ ಲಾಡ್ಜ್ ನ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ಮಾಡಿದಾಗ ಭಾರ್ಗವಿ ಮುಂಜಾನೆ 3 ಗಂಟೆ ವೇಳೆಯಲ್ಲಿ ಸೆಲ್ಲಾರ್ ಮೂಲಕ ನಿರ್ಗಮಿಸಿರುವ ದೃಶ್ಯ ಗೊತ್ತಾಗಿದೆ.

ಲಾಡ್ಜ್ ವ್ಯವಸ್ಥಾಪಕರು,ಸಿಬ್ಬಂದಿ ಕೂಡಲೇ ಬಾಲಕ ಶಶಾಂಕ್ ನನ್ನ ಲಷ್ಕರ್ ಠಾಣೆಗೆ ಕರೆತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.ಭಾರ್ಗವಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ.

ಭಾರ್ಗವಿ ಗಂಡನಿಂದ ವಿಚ್ಛೇದನ ಪಡೆದಿದ್ದು ಮೈಸೂರಿನ ಯುವಕನೊಬ್ಬನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದು,ಯುವಕನ ಮನೆಗೆ ತೆರಳಿ ಗಲಾಟೆ ಮಾಡಿದ್ದಳೆಂದು ಗೊತ್ತಾಗಿದೆ.

ಭಾರ್ಗವಿಯ ಪೋಷಕರಿಗೆ ಪೊಲೀಸರು ವಿಚಾರ ಮುಟ್ಟಿಸಿದ್ದು, ಶಶಾಂಕ್ ನನ್ನು ಬಾಲ ಮಂದಿರದಮಭ ವಶಕ್ಕೆ ನೀಡಿದ್ದಾರೆ.

ಭಾರ್ಗವಿ ಹಾಗೂ ಶಶಾಂಕ್ ನನ್ನು ಸುರಕ್ಷಿತವಾಗಿ ಪೋಷಕರ ಬಳಿ ಸೇರಿಸಲು ಲಷ್ಕರ್ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


Share this with Friends

Related Post