Mon. Dec 23rd, 2024

ತವರೂರಲ್ಲಿ ಮತದಾನ ಮಾಡಿದ ಪ್ರಧಾನಿ

Share this with Friends

ಗಾಂಧೀನಗರ,ಮೇ.7:ಲೋಕಸಭಾ ಚುನಾವಣೆಗೆ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದು, ತವರು ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಿಶಾನ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಮತಗಟ್ಟೆಗೆ ತೆರಳಿ ಪ್ರಧಾನಿ ಮೋದಿ ಅವರು ಮತ ಚಲಾಯಿಸಿದರು.

ಇಂದು ಬೆಳಗ್ಗೆ ರಾಜಭವನದಿಂದ ಹೊರಟು ಪ್ರಧಾನಿ ಚಲಾಯಿಸಿದ ಪ್ರಧಾನಿ, ನಂತರ ಮತದಾನ ಮಾಡಿದ ಶಾಹಿ ತೋರಿಸಿ ಮತದಾನ ಮಾಡುವಂತೆ ಇತರರಿಗೂ ಪ್ರೇರೇಪಿಸಿದರು.

ಮತದಾನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೋದಿ, ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಉತ್ಸಾಹ ಇದೆ,ಎಲ್ಲ ರೀತಿಯ ವ್ಯವಸ್ಥೆಯನ್ನು ಆಯೋಗ ಮಾಡಿದೆ ಎಂದು ಪ್ರಶಂಸಿಸಿದರು.

ಮತದಾನ ಮಾಡಿದ ಬಳಿಕ 1 ಕಿಮೀ ವರೆಗೆ ಪ್ರಧಾನಿ ನಡೆದರು. ಮತದಾನ ಕೇಂದ್ರದ ಬಳಿ ನೆರದಿದ್ದ ಜನರತ್ತ ಕೈ ಬೀಸಿದರು.


Share this with Friends

Related Post