Wed. Dec 25th, 2024

ಸಮಾಜದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯ- ಸವಿತ ಗೌಡ

Share this with Friends

ಮೈಸೂರು, ಮಾ.11: ಸಮಾಜದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ
ಎಂದು ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ಗೌಡ್ತಿಯರ ಬಳಗದ ಅಧ್ಯಕ್ಷೆ ಸವಿತಾ ಗೌಡ ಹೇಳಿದರು.

ಕುವೆಂಪು ನಗರದ ನೇಗಿಲಯೋಗಿ ಸಭಾಂಗಣದಲ್ಲಿ ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ಗೌಡತಿಯರ ಬಳಗ ಹಾಗೂ ಒಕ್ಕಲಿಗರ ಸೇವಾ ವೇದಿಕೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಮ್ಮದೇ ಸಮಾಜದ ಮಹಿಳಾ ಸಾಧಕೀಯರನ್ನು ಸನ್ಮಾನಿಸಿದ ವೇಳೆ ಅವರು ಮಾತನಾಡಿದರು.

ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷನ ಸಮನಾಗಿ ಮಹಿಳೆ ದುಡಿಯುತ್ತಿದ್ದಾಳೆ,
ಏನನ್ನು ಅಪೇಕ್ಷಿಸದೆ ಕುಟುಂಬದ ನಿರ್ವಹಣೆ ಮಾಡುವ ಜೀವವೆಂದರೆ ತಾಯಿ ಮಾತ್ರ ಎಂದು ತಿಳಿಸಿದರು.

ಕೆಎಎಸ್ ಅಧಿಕಾರಿ ಇಂದಿರಮ್ಮ ಹಾಗೂ ವೈದ್ಯಾಧಿಕಾರಿ ಪ್ರಮೀಳಾ ಅವರನ್ನು ಸನ್ಮಾನಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಪದಾಧಿಕಾರಿಗಳಾದ ರಾಜೇಶ್ವರಿ ನಾಗರಾಜ್, ಲತಾ ರಮೇಶ್, ಮಮತಾ ಪುರುಷೋತ್ತಮ್, ಸುಧಾ ಸ್ವಾಮಿಗೌಡ,ಜಾನ್ಹವಿ, ವಿಜಯ ಮಂಜುನಾಥ್, ರಾಣಿ ಮಹೇಶ್, ಇಂದಿರಾ ಹಾಗೂ ಬಳಗದ ಸದಸ್ಯರು ಹಾಗೂ ವಿ ಎಸ್ ವಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post