ಮೈಸೂರು,ಮೇ.27: ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯ ಎಂದು ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಆರ್ಥಿಕವಾಗಿ ದುರ್ಬಲರಾದ ಬಡವರು ಹಾಗೂ ಸಮಾಜದ ಏಳ್ಗೆಗೆ ಅದ್ಯತೆ ಇರಬೇಕು ಈ ನಿಟ್ಟಿನಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ತನ್ನ ವಿಶಿಷ್ಟ ಸೇವೆಗಳ ಮೂಲಕ ಮೈಸೂರು ನಗರದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ನಗರದ ಎಂ ಜಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ 18ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಚಾಣಕ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕೆ ಬಿ ಲಿಂಗರಾಜು (ಕೈಗಾರಿಕಾ ಕ್ಷೇತ್ರ), ಡಾಕ್ಟರ್ ವೈ ಡಿ ರಾಜಣ್ಣ (ಸಾಹಿತ್ಯ ಕ್ಷೇತ್ರ), ಆರ್ ಕೃಷ್ಣ (ಮಾಧ್ಯಮ ಕ್ಷೇತ್ರ), ಶ್ರೀಧರ್ ಸಿ ಎಂ (ಸೈನಿಕ ಕ್ಷೇತ್ರ), ಶಿವಪ್ರಸಾದ್ (ಆರೋಗ್ಯ ಕ್ಷೇತ್ರ), ರಶ್ಮಿ (ಆರೋಗ್ಯ ಕ್ಷೇತ್ರ), ಅಮ್ಮ ರಾಮಚಂದ್ರ (ಜನಪದ ಕ್ಷೇತ್ರ), ಡಾಕ್ಟರ್ ಕವಿತಾ ಮಠದ (ಶಿಕ್ಷಣ ಕ್ಷೇತ್ರ), ಮಲ್ಲೇಶ್ (ಆರೋಗ್ಯ ಕ್ಷೇತ್ರ), ಶೋಭಾ (ರೂಪದರ್ಶಿ) ಇವರಿಗೆ ಚಾಣಕ್ಯ ಸೇವಾ ರತ್ನ ಪ್ರಶಸ್ತಿ ನೀಡಿ
ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ ಮಾತನಾಡಿ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಕಳೆದ 18 ವರ್ಷಗಳಿಂದ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ, ಸಾಮಾಜಿಕವಾಗಿ ಸಕಲ ಜೀವರಾಶಿಗಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದಿತರಲ್ಲಿ ಒಬ್ಬರಾದ ಡಾ ವೈ ಡಿ ರಾಜಣ್ಣ ಮಾತನಾಡಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿ ವಿಕ್ರಂ ಟ್ರಸ್ಟ್ ನ್ನು ಸಾಹಿತ್ಯ, ಸಂಸ್ಜೃತಿಯ ಕೆಲಸಗಳ ಜತೆಗೆ ಕರೋನಾ ಸಂದರ್ಭದಲ್ಲಿ ಕೂಡ ಮಾನವೀಯ ಅಂತಃಕರಣದ ಸೇವೆಗಳ ಮೂಲಕ ಮೈಸೂರಿಗರ ಗಮನ ಸೆಳೆದು ತನ್ನ ಸಾಮಾಜಿಕ ಹೊಣೆಗಾರಿಕೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.
ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಮಾತನಾಡಿ,ಕೆ ಎಂ ಪಿ ಕೆ ಟ್ರಸ್ಟ್ ಮೈಸೂರಿನ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಮತ್ತು ಇತರೆ ಕ್ಷೇತ್ರದಲ್ಲಿ ಸಾರ್ಥಕ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕೆ ಬಿ ಲಿಂಗರಾಜು (ಕೈಗಾರಿಕಾ ಕ್ಷೇತ್ರ), ಡಾಕ್ಟರ್ ವೈ ಡಿ ರಾಜಣ್ಣ (ಸಾಹಿತ್ಯ ಕ್ಷೇತ್ರ), ಆರ್ ಕೃಷ್ಣ (ಮಾಧ್ಯಮ ಕ್ಷೇತ್ರ), ಶ್ರೀಧರ್ ಸಿ ಎಂ (ಸೈನಿಕ ಕ್ಷೇತ್ರ), ಶಿವಪ್ರಸಾದ್ (ಆರೋಗ್ಯ ಕ್ಷೇತ್ರ), ರಶ್ಮಿ (ಆರೋಗ್ಯ ಕ್ಷೇತ್ರ), ಅಮ್ಮ ರಾಮಚಂದ್ರ (ಜನಪದ ಕ್ಷೇತ್ರ), ಡಾಕ್ಟರ್ ಕವಿತಾ ಮಠದ (ಶಿಕ್ಷಣ ಕ್ಷೇತ್ರ), ಮಲ್ಲೇಶ್ (ಆರೋಗ್ಯ ಕ್ಷೇತ್ರ), ಶೋಭಾ (ರೂಪದರ್ಶಿ ಕ್ಷೇತ್ರ)ಅವರಿಗೆ ಚಾಣಕ್ಯ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು.
ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಉದ್ಯಮಿ ಸ್ವೀಟ್ ಮಹೇಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಜಯ್ ಶಾಸ್ತ್ರಿ, ಪ್ರಕಾಶ್ ಪ್ರಿಯದರ್ಶನ್, ರೇಖಾ ಶ್ರೀನಿವಾಸ್, ವಿದ್ಯಾ, ದೀಪ, ಬೈರತಿ ಲಿಂಗರಾಜು, ಮಂಜುನಾಥ್ , ಸಚಿಂದ್ರ, ಮತ್ತಿತರರು ಪಾಲ್ಗೊಂಡಿದ್ದರು