Fri. Apr 18th, 2025

ಮನೆಯ ಗೋಡೆ ಕುಸಿದು‌ ತಂದೆ,ತಾಯಿ ಇಬ್ಬರು ಮಕ್ಕಳ ದುರ್ಮರಣ

Share this with Friends

ಬೆಂಗಳೂರು, ಜೂ.26: ಮಹಾಮಳೆಗೆ ಮನೆಯ ಗೋಡೆ ಕುಸಿದುಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ದಕ್ಷಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಣ ಕನ್ನಡ ಜಿಲ್ಲೆ, ಉಲ್ಲಾಳ ಸಮೀಪದ ಮುನ್ನೂರಿನ ಮದನಿ ನಗರದಲ್ಲಿ ಈ ದುರ್ಘಣನೆ ನಡೆದಿದ್ದು,ಮನೆಯ ಹಿಂಭಾಗದ ಕಂಪೌಂಡ್ ಕುಸಿದಿದ್ದರಿಂದ ತಂದೆ,ತಾಯಿ‌ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಯಾಸಿರ್(45), ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಉಳ್ಳಾಲ ಪೊಲೀಸರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share this with Friends

Related Post