Sat. Apr 19th, 2025

ಮಳೆಗೆ ಕುಸಿದ ಮನೆಯ ಗೋಡೆ:ಕಂದನ ರಕ್ಷಿಸಿ ತಾಯಿ ಸಾವು

Share this with Friends

ಮೈಸೂರು,ಜು.20: ಸತತ ಮಳೆಯಿಂದಾಗಿ ಮನೆ ಗೋಡೆ ಕುಸಿದರೂ ತನ್ನ ಕಂದನನ್ನು ಉಳಿಸಿ ಗೃಹಿಣಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕೆಗ್ಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಹೇಮಲತಾ(22) ಮೃತ ಗೃಹಿಣಿ,
ಗೋಡೆ ಕುಸಿವ ವೇಳೆ ಅಲ್ಲೇ ಇದ್ದ ತನ್ನ ಎರಡು ವರ್ಷದ ಕಂದನನ್ನು ಸುರಕ್ಷಿತ ಜಾಗಕ್ಕೆ ಎಸೆದು ಆಕೆ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post