Thu. Apr 3rd, 2025

ಏರ್‌ಪೋರ್ಟ್‌ ನಿಂದ ಆಸ್ಪತ್ರೆ,ಕೋರ್ಟ್ ಗೆ ಪ್ರಜ್ವಲ್ ಕರೆತಂದ ಮಹಿಳಾ ಅಧಿಕಾರಿಗಳು

Share this with Friends

ಬೆಂಗಳೂರು,ಮೇ.31: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು 35 ದಿನಗಳ ಬಳಿಕ ತಡರಾತ್ರಿ ಜರ್ಮನಿಯಿಂದ ಆಗಮಿಸಿದ ಕೂಡಲೇ ಏರ್ಪೋರ್ಟ್ ನಲ್ಲೆ ಬಂಧಿಸಲಾಗಿದೆ.

ಏರ್‌ಪೋರ್ಟ್‌ನಲ್ಲಿ ಗುರುವಾರ ಮಧ್ಯರಾತ್ರಿ 12.40 ರ ಸುಮಾರಿಗೆ ಮೂವರು ಮಹಿಳಾ ಅಧಿಕಾರಿಗಳ ಮೂಲಕ ಬಂಧಿಸಲಾಗಿದೆ.

ಜೀಪ್‌ ಚಾಲಕ ಹೊರತು ಪಡಿಸಿದರೆ ಉಳಿದವರೆಲ್ಲಾ ಮಹಿಳಾ ಅಧಿಕಾರಿಗಳೇ ಇದ್ದರು, ಇದು ಏಕೆ ಎಂಬುದು ಚರ್ಚೆಗೆ ಗ್ರಾಸ ಒದಗಿಸಿದೆ.

ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಬೇಕು. ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂದೇಶ ರವಾನಿಸಲು ಮಹಿಳಾ ಅಧಿಕಾರಿಗಳಿಂದ ಎಸ್‌ಐಟಿ ಬಂಧನ ಮಾಡಿಸಿದೆ.

ಇಂದು ಪ್ರಜ್ವಲ್ ರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮತ್ತು ನ್ಯಾಯಾಲಯಕ್ಕೆ ಕರೆದೊಯ್ಯುವಾಗಲೂ ಮಹಿಳಾ‌ ಅಧಿಕಾರಿಗಳೇ ಇದ್ದುದು ವಿಶೇಷ.


Share this with Friends

Related Post