Mon. Dec 23rd, 2024

ಹೆಚ್ ಡಿ ಕೆ ಭೇಟಿಯಾದ ತೇಜಸ್ವಿ ಸೂರ್ಯ, ಡಾ.ಸುಧಾಕರ್

Share this with Friends

ಬೆಂಗಳೂರು, ಮಾ.25: ಲೋಕಸಭಾ‌ ಚುನಾವಣೆ ಇನ್ನು ಕೆಲವೇ ದಿನಗಳು ಇದ್ದು,ಅಭ್ಯರ್ಥಿಗಳು ಚುರುಕಾಗಿ ಕಾರ್ಯ ಪ್ರಾರಂಭಿಸಿದ್ದಾರೆ.

ಈ‌ ಬಾರಿ‌ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಗೆಲುವಿಗೆ ಒಟ್ಟಾಗಿ ಶ್ರಮಿಸಲಿದ್ದಾರೆ.

ಹಾಗಾಗಿ ಬಿಜೆಪಿಯಿಂದ ಸ್ಪರ್ಧೆಗಿಳಿದಿರುವ ಹಾಲಿ ಸಂಸದ‌ ತೇಜಸ್ವಿ ಸೂರ್ಯ,ಟಿಕೆಟ್ ಗಿಟ್ಟಿಸಿರುವ ಡಾ.ಕೆ.ಸುಧಾಕರ್ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ,ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು.

ಕುಮಾರಸ್ವಾಮಿ ನಿನ್ನೆಯಷ್ಟೇ ಹೃದಯ ಚಿಕಿತ್ಸೆ ಪಡೆದು ವಾಪಸಾಗಿದ್ದು ಬಿಜೆಪಿಯ ಅನೇಕ‌ ನಾಯಕರು ಅವರ ಆರೋಗ್ಯ ವಿಚಾರಿಸಿದರು.

ತೇಜಸ್ವಿ ಸೂರ್ಯ ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ ನಮಸ್ಕರಿಸಿ ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು.

ಈ ವೇಳೆ ಚುನಾವಣಾ ಪ್ರಚಾರದಲ್ಲಿ ಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಒಂದೆರಡು ದಿನಗಳ ವಿಶ್ರಾಂತಿ ನಂತರ ಪ್ರಚಾರದಲ್ಲಿ ತೊಡಗುತ್ತೇನೆ ನನ್ನ ಸಂಪೂರ್ಣ ಬೆಂಬಲ ನಿಮಗಿದೆ ಎಂದು ಕುಮಾರಸ್ವಾಮಿಯವರು ಭರವಸೆ ನೀಡಿದರೆಂದು ತೇಜಸ್ವಿ ಸೂರ್ಯ ಮಾಧ್ಯಮಗಳಿಗೆ ತಿಳಿಸಿದರು.

ಅದೇ ರೀತಿ ಡಾ.ಕೆ.ಸುಧಾಕರ್ ಕೂಡಾ ಕುಮಾರಸ್ವಾಮಿ ಅವರು ಶೀಘ್ರವಾಗಿ ಆರೋಗ್ಯವಂತರಾಗುವಂತೆ ಹಾರೈಸಿದರು.

ತಮಗೆ ಜೆಡಿಎಸ್ ಬೆಂಬಲ ನೀಡುವಂತೆ ಕುಮಾರಸ್ವಾಮಿ ಅವರಲ್ಲಿ ಸುಧಾಕರ್ ಮನವಿ ಮಾಡಿದರು.


Share this with Friends

Related Post