Wed. Dec 25th, 2024

ಕುಸುಮಾರನ್ನ ಶಾಸಕಿ ಮಾಡಲು ನನ್ನ ಕೊಲೆಗೆ ಸಂಚು: ಮುನಿರತ್ನ ಬಾಂಬ್

Share this with Friends

ಬೆಂಗಳೂರು: ಕುಸುಮಾ ಅವರನ್ನು ಶಾಸಕಿ ಮಾಡಲು ಡಿ.ಕೆ ಸುರೇಶ್‌, ಡಿ.ಕೆ ಶಿವಕುಮಾರ್‌ ನನ್ನ ಮೇಲೆ ಆಸೀಡ್‌ ದಾಳಿ ಮಾಡಿಸಿದ್ದಾರೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ 100 ನೆ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾನು ತೆರಳುತ್ತಿದ್ದಾಗ ಏಕಾಏಕಿ ಕಲ್ಲು ಮತ್ತು ಮೊಟ್ಟೆಯಿಂದ ದಾಳಿ ಮಾಡಲಾಗಿದೆ,ಅಲ್ಲದೆ ಕಾರಿನ ಗಾಜಿನ ಮೇಲೆ ಕಲ್ಲು ಬಿದ್ದಿವೆ ಎಂದು ಮುನಿರತ್ನ ದೂರಿದ್ದಾರೆ.

ಮೊಟ್ಟೆಯ ಒಳಗಡೆ ಆಸಿಡ್ ಹಾಕಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ. ಡಿ.ಕೆ ಸುರೇಶ್‌ ಅವರಿಗೆ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಬೇಕು ಎಂಬ ಆಸೆ ಇದೆ. ಈ ಕಾರಣಕ್ಕೆ ನನ್ನ ಮೇಲೆ ದಾಳಿ ಮಾಡಿಸಲಾಗಿದೆ ಎಂದು ಮುನಿರತ್ನ ದೂರಿದ್ದಾರೆ.


Share this with Friends

Related Post