Tue. Dec 24th, 2024

ಆಡು ಮುಟ್ಟದ ಸೊಪ್ಪಿಲ್ಲ, ಡಾ.ರಾಜ್ ಮಾಡದ ಪಾತ್ರವಿಲ್ಲ:ಅಯೂಬ್ ಖಾನ್

Share this with Friends

ಮೈಸೂರು, ಏ.24: ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಡಾ.ರಾಜಕುಮಾರ್ ಅವರು ಮಾಡದ ಪಾತ್ರವಿಲ್ಲ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್‌ ಸ್ಮರಿಸಿದರು.

ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ರವರ 95ನೇ ಜನ್ಮದಿನೋತ್ಸವ ಅಂಗವಾಗಿ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಡಾ.ರಾಜಕುಮಾರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಇಡೀ ಭಾರತ ಚಿತ್ರರಂಗವೇ ಕರುನಾಡಿತ್ತ ತಿರುಗಿ ನೋಡುವಂತೆ ಮಾಡಿದ್ದು ಡಾ. ರಾಜಣ್ಣ ನವರು, ಮೈಸೂರಿನ ಮೇಯರ್ ಆಗಲೂ ನನಗೆ ಪ್ರೇರೆಪಿಸಿದ್ದು ಕೂಡಾ ರಾಜಣ್ಣ ಅವರು ಮಾಡಿದ್ದ ಮೇಯರ್ ಮುತ್ತಣ್ಣ ಚಿತ್ರದ ಪಾತ್ರ ಎಂದು ಹೇಳಿದರು.

ಇಂದಿಗೂ ಸಹ ಗಂಧದ ಗುಡಿ ಚಿತ್ರದ ಅವರ ನಟನೆ ನಮ್ಮ ಅರಣ್ಯ, ಪರಿಸರವನ್ನ ಕಾಪಾಡಬೇಕೆಂದು ಸಮಾಜಕ್ಕೆ ನೀಡಿದ ಸಂದೇಶವನ್ನು ಪಾಲಿಸುವಲ್ಲಿ ಯುವಜನತೆ ಮುಂದಾಗಬೇಕು ಎಂದು ಆಯೂಬ್ ಖಾನ್ ಕರೆ ನೀಡಿದರು. ಯುವಪೀಳಿಗೆಯಲ್ಲಿ ಪರಿಸರ ಕಾಳಜಿ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್. ಜಿ ಗೌಡ, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ನಾಗೇಶ್, ವರುಣಾ ಮಹದೇವ್, ಕೃಷ್ಣಪ್ಪ, ಲೋಕೇಶ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಜು, ಶಿವು ಕೆಜಿ ಕೊಪ್ಪಲು, ಸೋಮಣ್ಣ, ಗಿರೀಶ್, ರಾಮು ಧನಂಜಯ್ ಶಿವರಾಜ್ ಮತ್ತಿತರರು ಹಾಜರಿದ್ದರು.


Share this with Friends

Related Post