ಮೈಸೂರು,ಮೇ.19: ಮನೆಗಳ್ಳನನ್ನು ಬಂಧಿಸಿರುವ ಉದಯಗಿರಿ ಠಾಣೆ
ಪೊಲೀಸರು 26 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ರಾಜೀವ್ ನಗರದ ನಿವಾಸಿ ಸೈಯದ್ ಅಸ್ಲಾಂ ಬಂಧಿತ ಆರೋಪಿಯಾಗಿದ್ದು,ಆತನಿಂದ
392.5 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಶಕ್ತಿನಗರದ ಮನೆಯೊಂದರಲ್ಲಿ ಕಳವಾಗಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಉದಯಗಿರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನ ಬಂಧಿಸಿದ್ದಾರೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಅವರ ಉಸ್ತುವಾರಿಯಲ್ಲಿ ಉದಯಗಿರಿ ಠಾಣೆ ಇನ್ಸ್ ಪೆಕ್ಟರ್ ಸುಧಾಕರ್ ಪಿಎಸ್ಸೈ ಆನಂದ್ ಹಾಗೂ ನಾಗರಾಜ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಿದ್ದಿಖಿ ಅಹ್ಮದ್,ಪ್ರಕಾಶ್, ಸಂತೋಷ್ ಪವಾರ್,ಮಲ್ಲಿಕಾರ್ಜುನ್ ಚೌಗಲೆ,ಸಮೀರ್ ಪಟೇಲ್,ಹಾಗೂ ಕು.ನಾಜಿಯಾ ಷರೀಫ್ ಪಾಲ್ಗೊಂಡಿದ್ದರು.
ಈ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಪ್ರಶಂಸಿಸಿದ್ದಾರೆ.