Sat. Apr 12th, 2025

ಮನೆಯ ಹಿಂಬಾಗಿಲು ಮೀಟಿ ಹಣ, ಚಿನ್ನಾಭರಣ ದೋಚಿದ ಕಳ್ಳರು

Share this with Friends

ಮೈಸೂರು,ಮಾ.21: ಮನೆಯೊಂದರ ಹಿಂಬಾಗಿಲನ್ನು ಮೀಟಿ ಖದೀಮರು 1.09 ಲಕ್ಷ ರೂ ಹಾಗೂ ಚಿನ್ನ,ಬೆಳ್ಳಿ ದೋಚಿರುವ‌ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ದಲ್ಲಾಳ ಕೊಪ್ಪಲು ಗ್ರಾಮದ ಒಂಟಿ ಮನೆಯಲ್ಲಿ ಈ‌ ಘಟನೆ ನಡೆದಿದೆ.

ತಿಮ್ಮೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.ಅವರು ಮುಂಬಾಗಿಲಿಗೆ ಬೀಗ ಹಾಕಿ ದೇವಸ್ಥಾನಕ್ಕೆ ಹೋಗಿದ್ದಾಗ‌ ಈ ಕೃತ್ಯ ನಡೆದಿದೆ.

ಅವರು ಹಿಂದಿರುಗುವಷ್ಟರಲ್ಲಿ ಹಿಂಭಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು1.09 ಲಕ್ಷ ರೂ, 13 ಗ್ರಾಂ ಚಿನ್ನ ಮತ್ತು ಬೆಳ್ಳಿ ಕಾಲು ಚೈನು ದೋಚಿ ಪರಾರಿಯಾಗಿದ್ದಾರೆ.

ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post