Mon. Jan 6th, 2025

ದೇವಾಲಯದ ಹುಂಡಿಯನ್ನೂ ಬಿಡದ ಕಳ್ಳರು

Share this with Friends

ಹುಣಸೂರು,ಜೂ.13:‌ನೀಚ‌ ಕಳ್ಳರು ದೇವಾಲಯವನ್ನೂ ಬಿಡದೆ ದೋಚಿರುವ ಹೇಯ ಘಟನೆ ‌ಹುಣಸೂರಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಸಿರೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಿರೇನಹಳ್ಳಿ ಗ್ರಾಮದ ಭೈರವೇಶ್ವರ ದೇವಾಲಯದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.

ಕತರ್ನಾಕ್ ಕಳ್ಳರು ಹುಂಡಿಯನ್ನ ಒಡೆದು ಚಿಲ್ಲರೆ ಹಣವನ್ನು ಅಲ್ಲೇ ಬಿಟ್ಟು ನೋಟುಗಳನ್ನ ಮಾತ್ರ ಕೊಂಡೊಯ್ದಿದ್ದಾರೆ.

ಹುಂಡಿಯಲ್ಲಿ ಸುಮಾರು ಒಂದು ಲಕ್ಷ ರೂ ಸಂಗ್ರಹವಾಗಿತ್ತೆಂದು ದೇವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಬೆರಳಚ್ಚುಮುದ್ರೆ ತಜ್ಞರೊಂದಿಗೆ ಪೊಲೀದರು ಭೇಟಿ ನೀಡಿ ಪರಿಶೀಲನೆ ನಡೆಸಿದರು,ಶ್ವಾನದಳ ದೇವಾಲಯದ ಹೊರಭಾದಲ್ಲಿ ಸುತ್ತಾಡಿದವು.

ಹುಣಸೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post