Tue. Apr 15th, 2025

ಯದುವೀರ್ ಪುತ್ರನಿಗೆ ತೊಟ್ಟಿಲು ಶಾಸ್ತ್ರ

Share this with Friends

ಮೈಸೂರು: ಮೈಸೂರು ರಾಜ ವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ‌ ಎರಡನೆ ಪುತ್ರನಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಲಾಯಿತು.

ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯದುವೀರ್ ಒಡೆಯರ್ ಮತ್ತು ಪತ್ನಿ ತ್ರಿಷಿಕಾ ಅವರು ತೊಟ್ಟಿಲು ಶಾಸ್ತ್ರ ನೆರವೇರಿಸಿದರು.

ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಅವರ ಮೊದಲ ಪುತ್ರ ಆಧ್ಯ ಮತ್ತಿತರರು ಉಪಸ್ಥಿತರಿದ್ದರು.

ಆದ್ಯವೀರ್ ಒಡೆಯರ್ ತೊಟ್ಟಿಲು ಹಿಡಿದು ಸಹೋದರನ ನೋಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ತಾಯಿ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ತೊಟ್ಟಿಲು ಶಾಸ್ತ್ರ ನಡೆಯಿತು.


Share this with Friends

Related Post