Tue. Dec 24th, 2024

ರೈಲು ಹರಿದು ಮೂವರು ಯುವಕರ ದುರ್ಮರಣ

Share this with Friends

ಕೊಪ್ಪಳ, ಜು.19: ರೈಲ್ವೆ ಹಳಿ ಮೇಲೆ ಮದ್ಯ ಸೇವನೆ ಮಾಡಿ ಮಲಗಿದ್ದವರ ಮೇಲೆ ರೈಲು ಹರಿದು ಮೂವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಗಂಗಾವತಿ ನಗರದ ಬಳಿ ನಡೆದಿದೆ.

ಕಳೆದ ರಾತ್ರಿ 9.30ಕ್ಕೆ ಹುಬ್ಬಳ್ಳಿ-ಸಿಂದನೂರು ಎಕ್ಸಪ್ರೆಸ್ ರೈಲು ಹರಿದು ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಗಾವತಿ ನಗರದ ಮೌನೇಶ್ ಪತ್ತಾರ (23), ಸುನೀಲ್ (23), ವೆಂಕಟ್ ಭೀಮನಾಯ್ಕ (20) ಮೃತ ಯುವಕರು.

ಈ ಯುವಕರು ಕಳೆದ ರಾತ್ರಿ ರೈಲ್ವೆ ಹಳಿ ಬಳಿ ಪಾರ್ಟಿ ಮಾಡಿ, ನಂತರ ಹಳಿ ಮೇಲೇ ಮಲಗಿದ್ದರು ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಗದಗ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post