Tue. Dec 24th, 2024

ಕೆ ಎಂ ಪಿ ಕೆ ಟ್ರಸ್ಟ್ ಕಚೇರಿಯಲ್ಲಿ ತಿಲಕರಜಯಂತೋತ್ಸವ

Share this with Friends

ಮೈಸೂರು,ಜು.23: ನಗರದ ಕೆ ಎಂ ಪಿ ಕೆ ಟ್ರಸ್ಟ್ ಕಚೇರಿಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ 168 ನೇ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೆ ಎಂ ಪಿ ಕೆ‌ ಚಾರಿಟೇಬಲ್ ಟ್ರಸ್ಟ್ ಹಾಗೂ ವೀರ ಸಾವರ್ಕರ್ ಯುವ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಿಲಕರ ಭಾವಚಿತ್ರಕ್ಕೆ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಪುಷ್ಪ ನಮನ‌ ಸಲ್ಲಿಸಲಾಯಿತು.

ಈ‌ ವೇಳೆ ಮಾತನಾಡಿದ ಡಿ.ಟಿ. ಪ್ರಕಾಶ್, ದೇಶದ ಸ್ವಾತಂತ್ರ್ಯಕ್ಕೆ ಗಾಂಧೀಜಿಯವರ ಅಹಿಂಸಾ ಮಾರ್ಗ, ಸುಭಾಷ್ ಚಂದ್ರಬೋಸ್ ರವರು ಶಸ್ತ್ರದ ಕ್ರಾಂತಿ ಮಾರ್ಗದ ಜೊತೆಯಲ್ಲೆ ಬಾಲಗಂಗಾಧರ ತಿಲಕರ ಸಾಮೂಹಿಕ ಸಾರ್ವಜನಿಕ ಗಣಪತಿ ಹಬ್ಬ ಅಚರಣೆ ಶಾಸ್ತ್ರದ ಮಾರ್ಗವೂ ದೇಶದಲ್ಲಿ ಲಕ್ಷಾಂತರ ಜನಸಾಮನ್ಯರನ್ನ ಒಗ್ಗೂಡಿಸಿತು, ರಭೀಂದ್ರನಾಥ ಠಾಗೂರರು ಲೋಕಮಾನ್ಯ ಎಂಬ ಬಿರುದನ್ನು ತಿಲಕರಿಗೆ ನೀಡಿದರು ಎಂದು ತಿಳಿಸಿದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಅವರು ಮಾತನಾಡಿ ದೇಶದ ಸ್ವಾತಂತ್ರ್ಯದ ಹೋರಾಟಗಳಲ್ಲಿ ತ್ರಿವಳಿ ರತ್ನಗಳು ಬಾಲ್, ಲಾಲ್, ಪಾಲ್ ಎಂದೇ ಪ್ರಖ್ಯಾತಿಯಾಗಿದ್ದರು, ದೇಶದೆಲ್ಲೆಡೆ ಯಾವುದೇ ಜಾತಿಯಿಲ್ಲದೆ ಸಾರ್ವಜನಿಕ ಗಣೇಶ ಹಬ್ಬದ ಮೂಲಕ ಸ್ವಾತಂತ್ರ್ಯ ಸಂಘಟನೆ ಪ್ರಾರಂಭಿಸಿದವರು ತಿಲಕರು ಎಂದು ಸ್ಮರಿಸಿದರು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ ಸಾವರ್ಕರ್ ಅವರಿಗೆ ತಿಲಕರು ಅದರ್ಶವಾಗಿದ್ದರು, ಅವರು ಆರಂಭಿಸಿದ ಸ್ವದೇಶಿ ಚಳವಳಿ ಹಾಗೂ ಸಾರ್ವಜನಿಕ ಗಣೇಶೋತ್ಸವವನ್ನು ಸಾವರ್ಕರ್ ಮುಂದುವರಿಸಿದರು ಎಂದು ತಿಳಿಸಿದರು.

ನಗರ ಪಾಲಿಕೆ‌ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸವಿತಾ ಗೌಡ,ಆರ್ ಪರಮೇಶ್ ಗೌಡ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವೀರ ಸಾವರ್ಕರ್ ಯುವ ಬಳಗದ ಸಂಚಾಲಕ ಸಂದೇಶ, ಪ್ರಮೋದ್ ಗೌಡ, ಶ್ರೀನಿವಾಸ್, ಚಂದನ್ ಗೌಡ, ಹೊಯ್ಸಳ ಕರ್ನಾಟಕ ನಿರ್ದೇಶಕ ವಿಜಯಕುಮಾರ್, ಎಸ್ ಎನ್ ರಾಜೇಶ್, ಬೈರತಿ ಲಿಂಗರಾಜು, ಜಗದೀಶ್, ಸುಚೇಂದ್ರ ಮತ್ತಿತರರು ಹಾಜರಿದ್ದರು.


Share this with Friends

Related Post