Mon. Dec 23rd, 2024

ನಾಳೆ,ನಾಡಿದ್ದರಲ್ಲಿ ಚುನಾವಣೆ ವೇಳಾಪಟ್ಟಿ ಘೋಷಣೆ ಸಾಧ್ಯತೆ:ಶೋಭಾ‌ ಕರಂದ್ಲಾಜೆ

Share this with Friends

ವಿಜಯಪುರ,ಮಾ.13: ಲೋಕಸಭೆಗೆ ನಾಳೆ ಅಥವಾ ನಾಡಿದ್ದು ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಾ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲೋ ಕ್ಷೇತ್ರ ಹಾಗಾಗಿ ಬೇಡಿಕೆಯಿದೆ ಎಂದು ಹೇಳಿದರು.

ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಜನರು ‌ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದಾರೆ, ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಮಾಡಿದ್ದೇನೆ, ಗೋ ಬ್ಯಾಕ್​ ಅನ್ನುವುದು ಶೋಭಾಯಮಾನವಲ್ಲ, ನಾನು ಪಕ್ಷಕ್ಕಾಗಿ ತಳಮಟ್ಟದಿಂದ ದುಡ್ಡಿದಿದ್ದೇನೆ, ಕ್ಯಾಬಿನೆಟ್​​ನಲ್ಲಿ ಸೇವೆ ಸಲ್ಲಿಸಿದ್ದೇನೆ, ಒಟ್ಟಿನಲ್ಲಿ ಬಿಜೆಪಿಗಾಗಿ ನನ್ನನ್ನೇ ಅರ್ಪಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಬೇರೆಯವರು ಟಿಕೆಟ್ ಕೇಳಿದ್ದು ತಪ್ಪಲ್ಲ, ಆದ್ರೆ ಹಾಲಿ ಸಂಸದೆಯಾಗಿ ನನಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಬೇಸರ‌ ವ್ಯಕ್ತಪಡಿಸಿದರು.

ಹೊರಗಿನವರು ಬಂದು ಗೋಬ್ಯಾಕ್​ ಅಭಿಯಾನ ಮಾಡುತ್ತಿದ್ದಾರೆ, ಇದು ಎಷ್ಟರಮಟ್ಟಿಗೆ ಸರಿ, ‌ನಾನು ವಿಚಲಿತಳಾಗಿಲ್ಲ, ನಮ್ಮ ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್​ ನೀಡ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೋಭಾ ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುತ್ತೇನೆ, ಗೆಲ್ಲುತ್ತೇನೆ,ಆದರೆ‌ ಅಲ್ಲಿ ನನಗೆ‌ ಟಿಕೆಟ್ ನೀಡುವ ವಿಚಾರ ಗೊತ್ತಿಲ್ಲ ಎಂದರು.


Share this with Friends

Related Post