Fri. Mar 14th, 2025

ಬಹು ನಿರೀಕ್ಷಿತ ‘ಪುಷ್ಪ 2’ ಚಿತ್ರದ ಟೀಸರ್ ರಿಲೀಸ್

Pushpa 2 The Rule Teaser
Share this with Friends

‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಪುಷ್ಪ 2: ದಿ ರೂಲ್‌’ ಸಿನಿಮಾದ ಟೀಸರ್ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಪುಷ್ಪ 2’ ಸಿನಿಮಾದ ಟೀಸರ್ ಪಕ್ಕಾ ಮಾಸ್ ಶೈಲಿಯಲ್ಲಿ ಇದೆ. ಈ ಟೀಸರ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ.

ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿ, ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವನ್ನು ಹಾಕಿಕೊಂಡು, ಕಾಲಿಗೆ ಗಜ್ಜೆ ಹಾಕಿಕೊಂಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ತ್ರಿಶೂಲ ಹಿಡಿದುಕೊಂಡು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಜಾತ್ರೆಯ ಬ್ಯಾಗ್ರೌಂಡ್‌ನಲ್ಲಿ ಈ ಟೀಸರ್ ಮೂಡಿಬಂದಿದೆ.

‘ಪುಷ್ಪ 2: ದಿ ರೂಲ್’ ಸಿನಿಮಾದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ‘ಪುಷ್ಪ 2’ ಟೀಸರ್ ಅನ್ನು ಇಷ್ಟಪಟ್ಟು ಲಕ್ಷಾಂತರ ಮಂದಿ ಲೈಕ್ ಒತ್ತಿದ್ದಾರೆ. ಪುಷ್ಪ 2 ಸಿನಿಮಾವು ಆಗಸ್ಟ್ 15ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಫಹಾದ್ ಫಾಸಿಲ್, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್‌, ‘ಡಾಲಿ’ ಧನಂಜಯ, ಜಗದೀಶ್‌ ಮುಂತಾದವರು ಅಭಿನಯಿಸಿದ್ದಾರೆ.

‘ಪುಷ್ಪ 2’ ಸಿನಿಮಾವನ್ನು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ, ಭೋಜಪುರಿ ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ಈ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾವು 1000 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿವೆ.


Share this with Friends

Related Post