ಮೈಸೂರು, ಮೇ.31: ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಾಂಪ್ರದಾಯಿಕ ಅಕ್ಷರಭ್ಯಾಸ ಮಂಡಿಸಲಾಯಿತು.
ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ , ವಿದ್ಯಾರ್ಥಿಗಳಿಗೆ ಹೂಗೊಚ್ಚ ಮತ್ತು ಸಿಹಿ ನೀಡಿ ಸ್ವಾಗತಿಸಲಾಯಿತು.
ನರ್ಸರಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಅಕ್ಷರಾಭ್ಯಾಸ ಮಾಡಿಸಿ ಸ್ವಾಗತ ಕೋರಿ, ಪಠ್ಯ ಪುಸ್ತಕ ವಿತರಿಸಿ, ಕ್ಷೀರ ಭಾಗ್ಯ ಯೋಜನೆಯ
ಹಾಲು ವಿತರಿಸಿ ದೈರ್ಯ ತುಂಬಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಗುರುಸ್ವಾಮಿ ಎಂ, ಮಾತನಾಡಿ,ಜ್ಞಾನದ ಆರಂಭ ಅಕ್ಷರಾಭ್ಯಾಸದ ಮೂಲಕ ಆಗುತ್ತದೆ, ಆದರೆ, ಅಕ್ಷರಗಳನ್ನು ಅಭ್ಯಾಸಿಸುವಾಗಲೇ ಮಕ್ಕಳಲ್ಲಿ ದೇವರ ಮೇಲೆ ಭಕ್ತಿ ಹಾಗೂ ಹಿರಿಯರ ಮೇಲೆ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರರು, ಮತ್ತು ಪೋಷಕರು ಹಾಜರಿದ್ದರು,ಶಾಲೆಯಲ್ಲಿ ಹಬ್ಬದ ವಾತಾವರಣ ಮೂಡಿತ್ತು.