ಬೆಂಗಳೂರು,ಜೂ.30: ಜಾಗತಿಕ ಬಯೋಫಾರ್ಮಾಸ್ಯೂಟಿಕಲ್ ಕಂಪನಿ ಆ್ಯಬ್‌ವೀ ಒಂಭತ್ತನೇ ವಾರ್ಷಿಕ ವೀಕ್ ಆಫ್ ಪಾಸಿಬಿಲಿಟೀಸ್ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಹಮ್ಮಿಕೊಂಡಿತ್ತು.
ಬೆಂಗಳೂರಿನಲ್ಲಿ ಕಂಪನಿಯ ಸ್ವಯಂಸೇವಕರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜೊತೆ ಸಂತಸದಿಂದ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡು ವಿವಿಧ ತರಬೇತಿ ನೀಡಿದರು
ಮೊದಲು ಐವಾಲಂಟಿಯರ್ ಪ್ರತಿನಿಧಿ ಸ್ವಯಂಸೇವಕರಿಗೆ ಫಾಸ್ಟ್ ಫ್ಯಾಶನ್ ಮತ್ತು ಜವಳಿ ತ್ಯಾಜ್ಯದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟರು.
ನಂತರ ಟಿ-ಶರ್ಟ್ ಅನ್ನು ಸರಳವಾಗಿ ಹೇಗೆ ಬಟ್ಟೆಯ ಚೀಲ ಮಾಡಬಹುದು ಎಂಬುದರ ಕುರಿತು ತರಬೇತಿ ನೀಡಿದರು.
ಆನೊ ಸ್ವಯಂಸೇವಕರನ್ನು ಒಬ್ಬರು ಇಬ್ಬರು ವಿದ್ಯಾರ್ಥಿಗಳ ಜೊತೆ ಸೇರಿಸಿ ಅವರಿಗೆ ಟಿ-ಶರ್ಟ್ ಅನ್ನು ಸರಳವಾಗಿ ಬಟ್ಟೆಯ ಚೀಲ ಮಾಡುವ ಕುರಿತು ತರಬೇತಿ ನೀಡಿದರು
ಇದು ಜಾಗತಿಕ ಮಟ್ಟದ ಸ್ವಯಂಸೇವಕ ಕಾರ್ಯಕ್ರಮವಾಗಿದ್ದು, ಸ್ಥಳೀಯ ಸಮುದಾಯಗಳಿಗೆ ನೆರವು ನೀಡಲು ಉದ್ಯೋಗಿಗಳೆಲ್ಲಾ ಒಟ್ಟಾಗಿ ಕಾರ್ಯಕ್ರಮ ರೂಪಿಸಿದ್ದರು.
ಜೂ.10 ರಿಂದ 50 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸಾವಿರಾರು ಆ್ಯಬ್‌ವೀ ಉದ್ಯೋಗಿಗಳು ಪಾಲುದಾರರ ಸಹಯೋಗದೊಂದಿಗೆ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನ ಒದಗಿಸುವ ಯೋಜನೆಗಳಲ್ಲಿ ಪಾಲ್ಗೊಂಡಿದ್ದರು
ಈ ವರ್ಷ, ಮುಂಬೈ, ಚೆನ್ನೈ, ನವದೆಹಲಿ ಮತ್ತು ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ವೀಕ್ ಆಫ್ ಪಾಸಿಬಿಲಿಟೀಸ್ (ಸಾಧ್ಯತೆಗಳ ವಾರ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
ಈ ಕುರಿತು ಆ್ಯಬ್‌ವೀ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಪಟ್ಟತ್ತಿಲ್, ಆ್ಯಬ್‌ವೀಯ ನಾವೆಲ್ಲರೂ ಸ್ವಯಂಸೇವಕರಂತೆ ಬೆಂಗಳೂರಿನಲ್ಲಿರುವ ನಮ್ಮ ಸ್ಥಳೀಯ ಸಮುದಾಯಗಳಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಬೆಂಗಳೂರಿನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಉರ್ದು ಶಾಲೆಯ ಕುರಿತು ಐವಾಲಂಟಿಯರ್ ಸಂಸ್ಥೆಯ ಜೊತೆ ಸಹಯೋಗ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಆ್ಯಬ್‌ವೀ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ನತಾಶಾ ತಿವಾರಿ, ಮಾತನಾಡಿ ಆ್ಯಬ್‌ವೀ ಫೌಂಡೇಶನ್ ವಿವಿಧ ಸ್ವಯಂಸೇವಕ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಗಳಲ್ಲಿ ಬದಲಾವಣೆ ಮಾಡಲು ಜಾಗತಿಕವಾಗಿ ಉದ್ಯೋಗಿಗಳನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.
ನಂತರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ನೀಡಲಾಯಿತು.