Tue. Dec 24th, 2024

ಬಸವ ತತ್ವಗಳಿಂದ ಪರಿವರ್ತನೆ ಸಾಧ್ಯ: ಡಾ. ಎಸ್ ಪಿ ಯೋಗಣ್ಣ

Share this with Friends

ಮೈಸೂರು,ಮೇ.9: ಬಸವ ಜಯಂತಿಯನ್ನು ವರ್ಷಕ್ಕೊಮ್ಮೆ ಸೀಮಿತಗೊಳಿಸದೇ ಬಸವ ವಚನ, ತತ್ವಗಳನ್ನು ಪಸರಿಸಲು ನಿತ್ಯವೂ ಆಚರಿಸುವಂತಾಗಬೇಕೆಂದು ಖ್ಯಾತ ವೈದ್ಯ ಡಾಕ್ಟರ್ ಎಸ್. ಪಿ ಯೋಗಣ್ಣ ಹೇಳಿದರು.

ಹಾಗಾದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಹಾಗೂ ಪರಿವರ್ತನೆ ಕಾಣಲು ಸಾಧ್ಯ ಎಂದು ಯೋಗಣ್ಣ ಅಭಿಪ್ರಾಯ‌ಪಟ್ಟರು.

ನಗರದ ರೂಪ ನಗರದಲ್ಲಿರುವ ವರಿಸಿದ್ದ ವಿನಾಯಕ ಗಣಪತಿ ದೇವಸ್ಥಾನದಲ್ಲಿ ಜನಸೇವಕ ಯುವ ಬ್ರಿಗೇಡ್
ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ವಚನಗಳ ಪ್ರತಿ ನುಡಿಯಲ್ಲೂ ಅಪಾರ ಶಕ್ತಿ ಅಡಗಿದೆ, ಶರಣರ ಕನಿಷ್ಠ ಒಂದು ವಚನದ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡರೂ ಜೀವನದಲ್ಲಿ ಪರಿವರ್ತನೆ ಕಾಣಬಹುದಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರ ಅರುಣ್ ಕುಮಾರ್ ಗೌಡ ಮಾತನಾಡಿ,ಬಸವಣ್ಣನವರ ವಚನಗಳನ್ನು ನಿತ್ಯ ಕಾಯಕದಲ್ಲಿ ತೊಡಗಿಸಿ‌ಕೊಂಡು ಪ್ರತಿಯೊಬ್ಬರೂ ಆಧುನಿಕ ಬಸವಣ್ಣನಾಗಬೇಕು ನಮ್ಮ ನಡೆ ನುಡಿಗಳಲ್ಲಿ ಪರಿವರ್ತನೆ ಮಾಡಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಪ್ರೊಫೆಸರ್ ಸಾಧನಾ ತಂತ್ರಿ (ಶಿಕ್ಷಣ ಕ್ಷೇತ್ರ) ಎಸ್ ಇ ಗಿರೀಶ್ (ಆರೋಗ್ಯ ಕ್ಷೇತ್ರ) ಬನ್ನೂರು ಡಾ. ಮಹೇಂದ್ರ ಸಿಂಗ್ ಕಾಳಪ್ಪ (ಪರಿಸರ ಕ್ಷೇತ್ರ) ಆರ್ ಮಹೇಶ್ ಕುಮಾರ್ (ಸಂಘಟನಾ ಕ್ಷೇತ್ರ) ಮಾಯ ಶಾನ್ ಬಾಗ್ (ಸಾಮಾಜಿಕ ಕ್ಷೇತ್ರ) ಅವರುಗಳಿಗೆ ಕಾಯಕಯೋಗಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ,
ವಿವೇಕಾನಂದ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಸವಿತಾ ಗೌಡ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ಡಿ ರಾಘವೇಂದ್ರ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,
ಶ್ರೀಧರ್, ಪ್ರವೀಣ್ ಕುಮಾರ್, ಮಹದೇವ್ ಸ್ವಾಮಿ, ನಂಜುಂಡಸ್ವಾಮಿ, ಸ್ಪಂದನ, ಚಂದ್ರಶೇಖರ್ ಪಾಟೀಲ್ , ರಕ್ಷಾ ಪ್ರಭು ಮತ್ತಿತರರು ಹಾಜರಿದ್ದರು.


Share this with Friends

Related Post