Tue. Dec 24th, 2024

ಸಮಂಜಸ ತಂಡದಿಂದ ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ

Share this with Friends

ಬೆಂಗಳೂರು, ಫೆ.17: ಬೆಂಗಳೂರಿನ ಸಮಂಜಸ ತಂಡದಿಂದ ಈ ಬಾರಿ ಪದ್ಮಶ್ರೀ ಪುರಸ್ಕೃತರಾದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನಿಜಕ್ಕೂ ಇದೊಂದು ಅತಿ ವಿಶೇಷ ಕಾರ್ಯಕ್ರಮವೇ ಆಗಿತ್ತು.ಹೆಸರೇ ಸಮಂಜಸ ತಂಡ ಹಾಗಾಗಿ ತಂಡ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ನಿಜಕ್ಕೂ ಹೆಸರಿಗೆ ತಕ್ಕಂತೆ ಅನ್ವರ್ಥವಾಗಿತ್ತು.ಅಂದರೆ ಸಮಂಜಸವಾಗಿತ್ತು.

ನಗರದ ಚಿತ್ರಕಲಾ ಪರಿಷತ್ ನಲ್ಲಿ ಇಂದು ಸಮಾಜ ತಂಡ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮನೋವೈದ್ಯ ಪದ್ಮಶ್ರೀ ಪುರಸ್ಕೃತರಾದ ಡಾ. ಸಿ. ಆರ್. ಚಂದ್ರಶೇಖರ್(ಮನೋವೈದ್ಯ),ಸತ್ಯನಾರಾಯಣ ಬೆಲ್ಲೆರಿ(ಕೃಷಿ ತಜ್ಞರು), ಡಾ. ಪ್ರೇಮಾ ಧನರಾಜ್ (ಅಗ್ನಿರಕ್ಷಾ ಸಂಸ್ಥಾಪಕರು,ಪ್ಲಾಸ್ಟಿಕ್ ‌ಸರ್ಜರಿ ವೈದ್ಯೆ), ಕೆ ಎಸ್ ರಾಜಣ್ಣ( ವಿಶೇಷ ಚೇತನ- ಸಮಾಜ ಸೇವಾ ಸಾಧಕರು), ಡಾ.ಎಂ. ಕೆ ಶ್ರೀಧರ್(ಶಿಕ್ಷಣ ಸಾಧಕರು) ಮತ್ತು ಸೋಮಣ್ಣ(ಸಮಾಜಸೇವಾ ಸಾಧಕರು) ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶ್ರಾಂತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ, ನಾಡೋಜ ಡಾ. ಹಂಪ ನಾಗರಾಜಯ್ಯ, ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ,ಪದ್ಮಶ್ರೀ ಕೆ. ವೈ. ವೆಂಕಟೇಶ್ ಅವರುಗಳು ಅಭಿನಂದಿಸಿ ಸನ್ಮಾನಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸ್ನೇಹಿತರ ಜೊತೆ ಸಂತಸ ಮಿಲನ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಹಾಗಾಗಿ ಸ್ನೇಹಮಯವಾಗಿತ್ತು.

ಸನ್ಮಾನಿತರು ತಮ್ಮ ಅನುಭವಗಳನ್ನು ಹಂಚಿಕೊಂಡರು.


Share this with Friends

Related Post