ತುಮಕೂರು: ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾಗಿ, ತುಮಕೂರು ಮತ್ತು ಊರುಕೆರೆ ನಡುವೆ ‘ನಾನ್ ಇಂಟರ್ ಲಾಕಿಂಗ್’ ತಾಂತ್ರಿಕ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಿವಿಧ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಲವು ರೈಲುಗಳನ್ನು ರದ್ದು ಅಥವಾ ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.
ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಮುನ್ನ ಅಧಿಕೃತ ರೈಲ್ವೆ ವಿಚಾರಣಾ ಕೇಂದ್ರ ಅಥವಾ ಆನ್ಲೈನ್ ಆ್ಯಪ್ಗಳ ಮೂಲಕ ರೈಲುಗಳ ನಿಖರ ಸಮಯವನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ. ರೈಲ್ವೆ ಅಭಿವೃದ್ಧಿ ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕೆಂದು ನೈಋತ್ಯ ರೈಲ್ವೆ ಇಲಾಖೆ ಮನವಿ ಮಾಡಿದೆ.
ರೈಲುಗಳ ರದ್ದತಿ:
• ರೈಲು ಸಂಖ್ಯೆ 56202 ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ಸೇವೆಯನ್ನು ದಿನಾಂಕ 15.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 56281 ಚಾಮರಾಜನಗರ – ತುಮಕೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 15.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ಸೇವೆಯನ್ನು ದಿನಾಂಕ 15.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್ಪ್ರೆಸ್ ಸೇವೆಯನ್ನು ದಿನಾಂಕ 16.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 56282 ತುಮಕೂರು – ಚಾಮರಾಜನಗರ ಪ್ಯಾಸೆಂಜರ್ ಸೇವೆಯನ್ನು ದಿನಾಂಕ 15.03.2026 ಮತ್ತು 16.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 56201 ಚಾಮರಾಜನಗರ – ಮೈಸೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 16.03.2026 ಮತ್ತು 17.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 66569 ಯಶವಂತಪುರ – ತುಮಕೂರು ಮೆಮು ಸೇವೆಯನ್ನು ದಿನಾಂಕ 15.03.2026 ರಂದು ರದ್ದುಗೊಳಿಸಲಾಗುವುದು
• ರೈಲು ಸಂಖ್ಯೆ 66570 ತುಮಕೂರು – ಯಶವಂತಪುರ ಮೆಮು ಸೇವೆಯನ್ನು ದಿನಾಂಕ 16.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 66573 ಯಶವಂತಪುರ – ತುಮಕೂರು ಮೆಮು ಸೇವೆಯನ್ನು ದಿನಾಂಕ 16.03.2026 ರಂದು ರದ್ದುಗೊಳಿಸಲಾಗುವುದು.
• ರೈಲು ಸಂಖ್ಯೆ 66574 ತುಮಕೂರು – ಯಶವಂತಪುರ ಮೆಮು ಸೇವೆಯನ್ನು ದಿನಾಂಕ 16.03.2026 ರಂದು ರದ್ದುಗೊಳಿಸಲಾಗುವುದು.
ರೈಲುಗಳ ಭಾಗಶಃ ರದ್ದತಿ:
• ದಿನಾಂಕ 15.03.2026 ರಂದು ರೈಲು ಸಂಖ್ಯೆ 66571 ಕೆಎಸ್ಆರ್ ಬೆಂಗಳೂರು – ತುಮಕೂರು ಮೆಮು ರೈಲು ಸೇವೆಯನ್ನು ಹಿರೇಹಳ್ಳಿ – ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
• ದಿನಾಂಕ 15.03.2026 ರಂದು ರೈಲು ಸಂಖ್ಯೆ 66568 ತುಮಕೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ತುಮಕೂರು – ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
• ದಿನಾಂಕ 15.03.2026 ರಂದು ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್ಪ್ರೆಸ್ ಸೇವೆಯನ್ನು ಅರಸೀಕೆರೆ – ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
• ದಿನಾಂಕ 15.03.2026 ಮತ್ತು 16.03.2026 ರಂದು ರೈಲು ಸಂಖ್ಯೆ 66567 ಕೆಎಸ್ಆರ್ ಬೆಂಗಳೂರು – ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ – ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸುವುದು.
• ದಿನಾಂಕ 15.03.2026 ಮತ್ತು 16.03.2026 ರಂದು ರೈಲು ಸಂಖ್ಯೆ 66572 ತುಮಕೂರು – ಕೆಎಸ್ಆರ್ ಬೆಂಗಳೂರು ಮೆಮು ಸೇವೆಯನ್ನು ತುಮಕೂರು – ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
• ದಿನಾಂಕ 16.03.2026 ರಂದು ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ಸೇವೆಯನ್ನು ಅರಸೀಕೆರೆ – ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
• ದಿನಾಂಕ 16.03.2026 ರಂದು ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು – ಧಾರವಾಡ ಎಕ್ಸ್ಪ್ರೆಸ್ ಸೇವೆಯನ್ನು ಕೆಎಸ್ಆರ್ ಬೆಂಗಳೂರು – ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಕೆಎಸ್ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ಅರಸೀಕೆರೆ ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಲಿದೆ.
• ದಿನಾಂಕ 16.03.2026 ರಂದು ರೈಲು ಸಂಖ್ಯೆ 66565 ಬಾಣಸವಾಡಿ – ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ – ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸುವುದು.
• ದಿನಾಂಕ 16.03.2026ರಂದು ರೈಲು ಸಂಖ್ಯೆ 66561 ತುಮಕೂರು – ಯಶವಂತಪುರ ಮೆಮು ಸೇವೆಯನ್ನು ತುಮಕೂರು – ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ರೈಲುಗಳ ಸಮಯ ಬದಲಾವಣೆ:
• ದಿನಾಂಕ 16.03.2026 ರಂದು ಹೊರಡುವ ರೈಲು ಸಂಖ್ಯೆ 20689 ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ 75 ನಿಮಿಷ ತಡವಾಗಿ ಹೊರಡಲಿದೆ.
• ದಿನಾಂಕ 16.03.2026 ರಂದು ಹೊರಡುವ ರೈಲು ಸಂಖ್ಯೆ 16217 ಮೈಸೂರು – ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ರೈಲು ಮೈಸೂರು ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ 105 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
ರೈಲುಗಳ ನಿಯಂತ್ರಣ:
• ದಿನಾಂಕ 12.03.2026 ರಂದು ಹೊರಡುವ ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
• ದಿನಾಂಕ 13.03.2026 ರಂದು ಹೊರಡುವ ರೈಲು ಸಂಖ್ಯೆ 17392 ಸಿಂಧನೂರು – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
• ದಿನಾಂಕ 13.03.2026 ರಂದು ಹೊರಡುವ ರೈಲು ಸಂಖ್ಯೆ 16228 ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
• ದಿನಾಂಕ 15.03.2026 ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
• ದಿನಾಂಕ 16.03.2026 ರಂದು ಹೊರಡುವ ರೈಲು ಸಂಖ್ಯೆ 20676 ಮೈಸೂರು – ಬೆಳಗಾವಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

