Sun. Mar 8th, 2026

ಕಿಡ್ನಾಪ್ ಕೇಸ್ ಗೆ ಟ್ವಿಸ್ಟ್: ಸಂತ್ರಸ್ತೆಯ ರಕ್ಷಿಸಿ ಬೆಂಗಳೂರಿಗೆ ಕರೆದೊಯ್ದ ಎಸ್‍ಐಟಿ

Share this with Friends


ಬೆಂಗಳೂರು,ಮೇ.4: ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮೈಸೂರಿನ ಕೆ.ಆರ್‌ ನಗರದ ಸಂತ್ರಸ್ತೆಯನ್ನು ರಕ್ಷಿಸಲಾಗಿದೆ.

ಮೈಸೂರು ಜಿಲ್ಲೆ ಹುಣಸೂರು ಸಮೀಪದ ರೇವಣ್ಣ ಆಪ್ತನ ಕಾಳೇನಹಳ್ಳಿ ತೋಟದ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು,ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ.

ಎಸ್‍ಪಿ ಸೀಮಾ ಲಾಠ್ಕರ್ ತಂಡ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ ಸದ್ಯ ಎಸ್‍ಐಟಿ ತಂಡ ಬೆಂಗಳೂರಿಗೆ ಕರೆತರುತ್ತಿದೆ.

ಪ್ರಕರಣ ಸಂಬಂಧ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡುವೆಯೇ ಕೆ.ಆರ್.ನಗರದ ಮಹಿಳೆಯ ಹುಡುಕಾಟ ಚುರುಕಾಗಿತ್ತು.

ಇದೀಗ ಸಂತ್ರಸ್ತೆ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ನಿನ್ನೆ ರಾತ್ರಿವರೆಗೂ ಶಿರಾದಲ್ಲಿದ್ದು, ಅಲ್ಲಿಂದ ಹುಣಸೂರಿಗೆ ಮಹಿಳೆಯನ್ನು ಕರೆದೊಯ್ದು ಇರಿಸಲಾಗಿತ್ತು.

ಎಸ್‌ಐಟಿ ಅಧಿಕಾರಿಗಳು ತೋಟದ ಮನೆಗೆ ದಾಳಿ ಮಾಡುತ್ತಿದ್ದಂತೆ ಆರೋಪಿಗಳು ಓಡಿಹೋಗಿದ್ದಾರೆ.


Share this with Friends

Related Post