Mon. Dec 23rd, 2024

ಎರಡು ಕಾಪ್ಟರ್ ಗಳು ಡಿಕ್ಕಿ‌: ಹತ್ತು ಮಂದಿ ಸಾವು

Share this with Friends

ಕೌಲಾಲಂಪುರ, ಏ. 23: ನೌಕಾ ಪರೇಡ್‌ನ ಪೂರ್ವಾಭ್ಯಾಸದ ವೇಳೆ ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು 10 ಸಿಬ್ಬಂದಿ ಮೃತಪಟ್ಟಿದ್ದಾರೆ.

ಮಲೇಷಿಯಾದ ಕೌಲಾಲಂಪುರದಲ್ಲಿ
ಮಂಗಳವಾರ ಬೆಳಗ್ಗೆ ಸುಮಾರು 9.30ಕ್ಕೆ ಪಶ್ಚಿಮ ರಾಜ್ಯ ಪೆರಾಕ್‌ನ ಲುಮುಟ್ ನೌಕಾ ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ನೌಕಾಪಡೆ ತಿಳಿಸಿದೆ.

ಎರಡೂ ಕಾಪ್ಟರ್ ಗಳಲ್ಲಿದ್ದ ಹತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಗುರುತಿಸಲು ಲುಮುಟ್ ನೇವಲ್ ಬೇಸ್ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮಂಗಳವಾರ ನೌಕಾ ಪರೇಡ್‌ನ ಪೂರ್ವಾಭ್ಯಾಸದ ವೇಳೆ ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದುಕೊಂಡು ಈ ಅವಘಡ‌ ಸಂಭವಿಸಿದೆ.


Share this with Friends

Related Post