Sat. Jan 4th, 2025

ಮನೆಗಳ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಅಂದರ್

Share this with Friends

ಬೆಂಗಳೂರು, ಏ.16: ಮನೆಗಳ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಐನಾತಿ ಕಳ್ಳರನ್ನು ಬೆಂಗಳೂರಿನ ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ ಮತ್ತು ಆತನ ಸಂಗಡಿಗ ವೆಂಕಟೇಶ ಬಂದಿತ ಆರೋಪಿಗಳಾಗಿದ್ದು ಅವರುಗಳಿಂದ 205 ಗ್ರಾಂ ತೂಕದ ಚಿನ್ನಾಭರಣ ಮತ್ತು ಕಳವು ಮಾಡಲು ಬಳಸುತ್ತಿದ್ದ ಸುಜುಕಿ ಆಕ್ಸೆಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಳ್ಳರು ರಸ್ತೆಗಳಲ್ಲಿ ಸುತ್ತುತ್ತಾ ಬೀಗ ಹಾಕಿದ ಮನೆಗಳನ್ನು ಗುರುತಿಟ್ಟುಕೊಂಡು ಜನಸಂಚಾರವಿಲ್ಲದ ಸಮಯದಲ್ಲಿ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಾಭರಣ ದೋಚಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

ಕಳವು ಮಾಲುಗಳನ್ನು ವೀಕ್ಷಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಮಮೂರ್ತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌‌ ಮುತ್ತುರಾಜು‌ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.


Share this with Friends

Related Post