Fri. Nov 1st, 2024

ಇಬ್ಬರು ಸರಗಳ್ಳರ ಬಂಧನ- ೧೦ ಲಕ್ಷ ಮೌಲ್ಯದ ಚಿನ್ನಾಭರಣ ವಶ

Share this with Friends

ಮೈಸೂರು, ಜೂ.25: ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ,ಇಬ್ಬರು‌ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಹಳೆ ಸರಗಳ್ಳರನ್ನು ಲಷ್ಕರ್ ಮೊಹಲ್ಲದ ಅಶೋಕರಸ್ತೆ,
ಜಂಕ್ಷನ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಸರಗಳ್ಳತನ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ.

ಒಟ್ಟು 10ಲಕ್ಷ ರೂ ಬೆಲೆಬಾಳುವ ೧೧೭ ಗ್ರಾಂ
ತೂಕದ ಚಿನ್ನಾಭರಣಗಳು, ಮತ್ತು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಮೈಸೂರುನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ೨, ಆಲನಹಳ್ಳಿ
ಪೊಲೀಸ್ ಠಾಣೆಯ ೧ ಸರಗಳ್ಳತನ ಪ್ರಕರಣಗಳು, ಮೇಟಗಳ್ಳಿ ಪೊಲೀಸ್ ಠಾಣೆಯ ೧ ದ್ವಿಚಕ್ರ ವಾಹನ
ಕಳ್ಳತನ ಪ್ರಕರಣ, ಹಾಗೂ ರಾಮನಗರ ಜಿಲ್ಲೆ ಹಾರೋಹಳ್ಳಿ ಪೊಲೀಸ್ ಠಾಣೆಯ ೧ ದೇವಸ್ಥಾನ ಕಳ್ಳತನ
ಪ್ರಕರಣ ಸೇರಿದಂತೆ ಒಟ್ಟು ೫ ಪ್ರಕರಣಗಳು ಪತ್ತೆಯಾಗಿವೆ.

ಈ ಆರೋಪಿಗಳು ಈ ಹಿಂದೆ ಸರಗಳ್ಳತನ
ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಿಂದ ಹೊರಬಂದು ಮತ್ತೆ ಅದೇ ಚಾಳಿಯನ್ನು ಮುಂದುವರೆಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮೈಸೂರು ನಗರದ ಉಪ ಪೊಲೀಸ್ ಆಯುಕ್ತರು ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಸಹಾಯಕ ಪೊಲೀಸ್
ಆಯುಕ್ತರಾದ ಎಸ್.ಎನ್ ಸಂದೇಶ್‌ಕುಮಾರ್‌ ಉಸ್ತುವಾರಿಯಲ್ಲಿ ಸಿಸಿಬಿ ಘಟಕದ ಹೆಚ್.ಎನ್.ಬಿ
ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್‌ಕುಮಾರ್ ಎಂ.ಹಾಗೂ ಸಿಸಿಬಿ ಘಟಕದ ಇತರೆ ಅಧಿಕಾರಿ
ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಬಿ. ರಮೇಶ್ ಪ್ರಶಂಸಿಸಿದ್ದಾರೆ.


Share this with Friends

Related Post