Mon. Dec 23rd, 2024

ಯುವತಿ ತಂದೆಯಿಂದ ಇಬ್ಬರ ಕೊಲೆ

Share this with Friends

ಬೆಳಗಾವಿ: ಮಗಳ ಹಿಂದೆ ಪ್ರೀತಿಸು ಅಂತಾ ಬಿದ್ದ ಯುವಕ ಹಾಗೂ ಸಹೋದರನ್ನ ಇಬ್ಬರನ್ನ ಯುವತಿ ತಂದೆ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಕೊಲೆ ಮಾಡಿದ ಘಟನೆ ಸವದತ್ತಿ ತಾಲೂಕಿನ ಕರಿಮನಿ‌ ಗ್ರಾಮದಲ್ಲಿ‌ ನಡೆದಿದೆ.ಯುವಕ ಯಲ್ಲಪ್ಪ ಹಳೇಗೋಡಿ (22) ಅತನ ಸಹೋದರ ಮಾಯಪ್ಪ (20) ಕೊಲೆಗಿಡಾಗಿದ್ದ ದುರ್ದೈವಿಗಳು

ಫಕೀರಪ್ಪನ‌ ಪುತ್ರಿಯನ್ನು ಪ್ರೀತಿಸುವಂತೆ ಯಲ್ಲಪ್ಪ ಬೆನ್ನುಬಿದ್ದಿದ್ದನು. ಈ ವಿಚಾರ ತಿಳಿದ ಫಕೀರಪ್ಪ ನನ್ನ ಪುತ್ರಿಯ ತಂಟೆಗೆ ಬರಬೇಡ ಅಂತಾ ಸಾಕಷ್ಟು‌ ಬಾರಿ ಎಚ್ಚರಿಕೆ ನೀಡಿದ್ದಾನೆ. ಆದರೆ ದಿನದಿಂದ‌ ದಿನಕ್ಕೆ ಇದು ತೀವ್ರಗೊಂಡಿದೆ.

ಯಲ್ಲಪ್ಪ ಹಾಗೂ ಫಕೀರಪ್ಪಾ ನಡುವೆ ಈ ವಿಚಾರಕ್ಕೆ ಸ್ವಲ್ಪ ಮಾತು ವಿಕೋಪಕ್ಕೆ‌ ತಿರುಗಿದರಿಂದ ಫಕೀರಪ್ಪ ಯಲಪ್ಪನಿಗೆ ಚಾಕುವಿನಿಂದ ಹಲ್ಲೆ‌ ಮಾಡಿದ್ದಾನೆ ಇದನ್ನು ನೋಡಿ ಜಗಳ ಬಿಡಿಸಲು ಹೋದ. ಅತನ ಸಹೋದರ ಮಾಯಪ್ಪನಿಗೂ ಚಾಕುವಿನಿಂದ ಹಲ್ಲೆ‌ ಮಾಡಿದ್ದರಿಂದ ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ‌ಮಾಯಪ್ಪ ಆಸ್ಪತ್ರೆಯಲ್ಲಿ ಕೊನೆಸಿರುಳಿದಿದ್ದಾನೆ.

ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ‌‌ ನಡೆಸಿ ಆರೋಪಿ ಫಕೀರಪ್ಪ ಭಾಂವಿಹಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


Share this with Friends

Related Post