Mon. Dec 23rd, 2024

ಮದ್ದೂರು, ಬಂಡೀಪುರ ಚೆಕ್‍ಪೋಸ್ಟ್ ಬಳಿ ದಾಖಲೆ ಇಲ್ಲದ ಹಣ ವಶ

Share this with Friends

ಚಾಮರಾಜನಗರ, ಮಾ.30: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ಹಾಗೂ ಬಂಡೀಪುರ ಚೆಕ್‍ ಪೋಸ್ಟ್ ಗಳಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮದ್ದೂರು ಚೆಕ್‍ಪೋಸ್ಟ್‍ನಲ್ಲಿ ಕೇರಳದಿಂದ ಬರುತ್ತಿದ್ದ ಅಶೋಕ ಲೈಲ್ಯಾಂಡ್ ಲಘು ಗೂಡ್ಸ್ ವಾಹನದಲ್ಲಿ ಮಹಮ್ಮದ್ ಸಾದಿಕ್ ಮತ್ತು ಲೀನಿಸ್ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 940000 ರೂ. ಗಳನ್ನು ಮತ್ತು ಕೇರಳದಿಂದ ಬರುತ್ತಿದ್ದ ಮಹೇಂದ್ರ ಬೋಲ್ಯಾರೋ ವಾಹನದಲ್ಲಿ ಮೋಹನ್ ಪಿ.ಕೆ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,00,000 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಡಿ.ಎಂ. ಗುರುಮಲ್ಲೇಶ್ ತಂಡದವರು ಜಪ್ತಿ ಮಾಡಿದ್ದಾರೆ.

ಬಂಡೀಪುರ ಚೆಕ್‍ಪೋಸ್ಟ್‍ನಲ್ಲಿ ಕೇರಳದಿಂದ ಬರುತ್ತಿದ್ದ ಅಶೋಕ ಲೈಲ್ಯಾಂಡ್ ಲಘು ಗೂಡ್ಸ್ ವಾಹನದಲ್ಲಿ ರಫೀಕ್ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,06,0000 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಎಂ.ಪಿ. ಶಿವಸ್ವಾಮಿ ತಂಡದವರು ಜಪ್ತಿ ಮಾಡಿದ್ದಾರೆ.

ಬಂಡೀಪುರ ಚೆಕ್‍ಪೋಸ್ಟ್‍ನಲ್ಲಿ ಕೇರಳದಿಂದ ಬರುತ್ತಿದ್ದ ಟಾಟಾ ಗೂಡ್ಸ್ ವಾಹನದಲ್ಲಿ ದಿನೇಶ್ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 94,500 ರೂ. ಗಳನ್ನು ಮತ್ತು ಕೇರಳದಿಂದ ಬರುತ್ತಿದ್ದ ಟಾಟಾ ಗೂಡ್ಸ್ ವಾಹನದಲ್ಲಿ ಕಿಶೋರ ಎಂಬುವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,04,0000 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಎಸ್. ಮಂಜುನಾಥ್ ತಂಡದವರು ಜಪ್ತಿ ಮಾಡಿದ್ದಾರೆ.

ಹಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸಮಂಜಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಣ ವಶಕ್ಕೆ ಪಡೆದು ಗುಂಡ್ಲುಪೇಟೆ ಉಪ ಖಜಾನೆಯಲ್ಲಿ ಇರಿಸಲಾಗಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.


Share this with Friends

Related Post