Fri. Nov 1st, 2024

ಕೇಂದ್ರ ಬಜೆಟ್ : ತೆರಿಗೆ ಮಿತಿ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

Share this with Friends

ನವದೆಹಲಿ; ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಕೊನೆಯ ಹಾಗೂ ಮಧ್ಯಂತರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದರು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಅವರು ಘೋಷಿಸಿದ್ದಾರೆ. ಆದಾಯ ತೆರಿಗೆ ಮಿತಿಯಲ್ಲಿ ಹೆಚ್ಚಳ ಮಾಡಬಹುದು ಎಂದು ಬಹಳ ನಿರೀಕ್ಷೆಯಿಂದ ಕಾದು ಕುಳಿತಿದ್ದ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಭಾರಿ ನಿರಾಶೆ ಮೂಡಿಸಿದೆ.

ಹೊಸ ತೆರಿಗೆ ಪಾವತಿ ಪದ್ಧತಿಯಲ್ಲಿ ತೆರಿಗೆ ಮಿತಿಯ ಹೆಚ್ಚಳವನ್ನು ಜನರು ನಿರೀಕ್ಷಿಸಿದ್ದರು. ಇದರ ಜತೆಗೆ ಹಳೆಯ ಪದ್ಧತಿಯನ್ನೇ ಮುಂದುವರಿಸಿರುವ ತೆರಿಗೆದಾರರು, ಕನಿಷ್ಠ ಪಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್‌ ಸ್ಲ್ಯಾಬ್‌ನಲ್ಲಿ ಕೊಂಚ ಏರಿಕೆ ಮಾಡಬಹುದು ಎಂದು ನಿರೀಕ್ಷೆ ಹೊಂದಿದ್ದರು. ಆದರೆ ಚುನಾವಣೆ ಸಮೀಪದಲ್ಲಿಯೂ ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ ನೆಮ್ಮದಿ ನೀಡುವ ಪ್ರಯತ್ನಕ್ಕೆ ಮುಂದಾಗಿಲ್ಲ.

ಬದಲಾಗಿ ಹಿಂದಿನ ತೆರಿಗೆಯ ನೀತಿಗಳಲ್ಲಿಯೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಹೊಸ ಪದ್ಧತಿ ಅಡಿ 2.2 ಲಕ್ಷದಿಂದ 7 ಲಕ್ಷಕ್ಕೆ ಇಳಿಕೆ ಮಾಡಲಾಗಿದೆ. 50- 75 ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಲಾಗಿದೆ. ತೆರಿಗೆ ಪಾವತಿಯನ್ನು ಸರಳ ಹಾಗೂ ಸುಲಭಗೊಳಿಸಲಾಗಿದೆ. ಕಡಿತಗೊಂಡ ತೆರಿಗೆ ಹಣದ ಮರು ಪಾವತಿಗೆ ಈ ಹಿಂದೆ 93 ದಿನಗಳು ತಗಲುತ್ತಿತ್ತು. ಅದನ್ನು ಪ್ರಸ್ತುತ ಕೇವಲ 10 ದಿನಗಳಿಗೆ ಇಳಿಸಲಾಗಿದೆ ಎಂದು ಹಿಂದಿನ ಸಾಧನೆಯನ್ನೇ ನಿರ್ಮಲಾ ಸೀತಾರಾಮನ್ ಹೇಳಿಕೊಂಡಿದ್ದರು.

2023- 24ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಮಾಡಿದ್ದರೂ, ಇದು ಹೊಸ ಪ್ರಕ್ರಿಯೆಯನ್ನು ಆಯ್ಕೆ ಮಾಡಿದವರಿಗೆ ಮಾತ್ರ ಅನ್ವಯವಾಗಿತ್ತು. 2020ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿತ್ತು. 2023ರ ಬಜೆಟ್‌ನಲ್ಲಿ ಅದನ್ನು ಸಾಮಾನ್ಯ ಬಳಕೆಯ ಪದ್ಧತಿಯನ್ನಾಗಿ ಬದಲಿಸಲಾಗಿತ್ತು. ಹೊಸ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಎಚ್‌ಆರ್‌ಎ, ಎಲ್‌ಟಿಎ, 80ಸಿ, 80 ಡಿ ಹಾಗೂ ಇತರೆ ನಿಯಮಗಳ ಅಡಿಯಲ್ಲಿ ಕೊಡುವ ವಿವಿಧ ವಿನಾಯಿತಿ ಹಾಗೂ ಕಡಿತಗಳಿಗೆ ಅನ್ವಯವಾಗುವುದಿಲ್ಲ. 2023ರ ಬಜೆಟ್ ವೇಳೆ ಹೊಸ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ ದಿಂದ 7 ಲಕ್ಷ ರೂ,ಗೆ ಹೆಚ್ಚಿಸಲಾಗಿತ್ತು.


Share this with Friends

Related Post