Sat. Jan 4th, 2025

ಯುಪಿಎಸ್ ಸಿ ಪರೀಕ್ಷೆ: ಬೆಳಿಗ್ಗೆ 6 ಗಂಟೆಗೇ ಮೆಟ್ರೋ ರೈಲು ಲಭ್ಯ

Share this with Friends

ಬೆಂಗಳೂರು, ಜೂ.13: ಇದೇ ಭಾನುವಾರ
(ಜೂ.16) ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (ಯುಪಿಎಸ್ ಸಿ ಪ್ರಿಲಿಮಿನರಿ ಎಕ್ಸಾಮ್) ಇರುವುದರಿಂದ ಮೆಟ್ರೋ ರೈಲುಗಳು ಬೆಳಿಗ್ಗೆ 6 ಗಂಟೆಯಿಂದಲೇ ಸಂಚರಿಸಲಿವೆ.

ಮೆಟ್ರೋದ ಎಲ್ಲಾ ಟರ್ಮಿನಲ್ ನಿಲ್ಯಾಣಗಳಾದ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ಬೆಳಿಗ್ಗೆ 7 ಗಂಟೆಗೆ ಬದಲು 6 ಗಂಟೆಯಿಂದಲೇ ಮೆಟ್ರೋ ರೈಲುಗಳು ಪ್ರಾರಂಭವಾಗಲಿದೆ.

ಪ್ರಯಾಣಿಕರು ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿ
ಕೊಳ್ಳಬೇಕೆಂದು ಬೆಂಗಳೂರು ಮೆಟ್ರೋ ರೈಲು ‌ನಿಗಮದ ವ್ಯವಸ್ಥಾಪಕರು ಕೋರಿದ್ದಾರೆ.


Share this with Friends

Related Post