Fri. Nov 1st, 2024

ಕಾನೂನು ಸುವ್ಯವಸ್ಥೆ ಕಾಪಾಡದಿದ್ದರೆ ಜಾಗ ಖಾಲಿ ಮಾಡಿ:ಬಸವರಾಜ ಬೊಮ್ಮಾಯಿ

Share this with Friends

ಹುಬ್ಬಳ್ಳಿ, ಮೇ.17: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ಜಾಗ ಖಾಲಿ ಮಾಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಕೊಲೆಯಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ‌ ಹೇಳಿದರು.

ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಬೊಮ್ಮಾಯಿ,ಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ,ಆರೋಪಿಗಳಿಗೆ ಕಾನೂನಿನ ಭಯವಾಗಲಿ, ಪೊಲೀಸರ ಭಯವಾಗಲಿ ಇಲ್ಲದಂತಾಗಿದೆ, ಏನು ಮಾಡಿದರೂ ನಡೆಯುತ್ತೆ ಎಂಬ ಭಾವನೆ ಮೂಡಿದೆ ಎಂದು ‌ಬೇಸರ‌ ವ್ಯಕ್ತಪಡಿಸಿದರು.

ನೇಹಾ ಪ್ರಕರಣ ನಡೆದ ನಂತರವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರ ನಾಯಕರು ದೊಡ್ಡ ದೊಡ್ಡ ಮಾತನಾಡಿದರು, ಏನೂ ಮಾಡದೆ ಇರುವ ಪರಿಣಾಮ ಈ ಹತ್ಯೆ ನಡೆದಿದೆ ಆರೋಪಿ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಹೇಳಿದರು.

ವಿರೋಧ ಪಕ್ಷದವರು ಹಳಿಕೆ ಕೊಟ್ಟರೆ ರಾಜಕೀಯ ಅಂತಾರೆ, ಇಷ್ಟೆಲ್ಲಾ ಕೊಲೆ ನಡೆದರೂ ನಾವು ಬಾಯಿ ಮುಚ್ಕೊಂಡು ಕೂರಬೇಕೇ ಎಂದು ಪ್ರಶ್ನಿಸಿದರು.

ನಮ್ಮ ಹೋರಾಟವನ್ನು ಇಲ್ಲಿಗೆ ಕೈ ಬಿಡಲ್ಲ, ಇದೇ ರೀತಿ ಕೊಲೆ ಪ್ರಕರಣ ನಡೆದರೆ ಜನರೆ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ‌ ಎಂದು ಎಚ್ಚರಿಸಿದ ಬಸವರಾಜ ಬೊಮ್ಮಾಯಿ, ಅಂಜಲಿ ಕುಟುಂಬಸ್ಥರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.


Share this with Friends

Related Post