ಮೈಸೂರು, ಮೇ.3: ಬಿಸಿಲಿನ ಬೇಗೆಯಲ್ಲಿ ಬೆಂದು ಹೋಗಿದ್ದ ಸಂಸ್ಕೃತಿಕ ನಗರಿ ಮೈಸೂರಿಗೆ ವರುಣ ಕೃಪೆ ತೋರಿದ್ದು ಸಂಜೆ ಧಾರಾಕಾರ ಮಳೆ ಸುರಿಯಿತು.
ಸಂಜೆ ಸುಮಾರು 5:00 ಭಾರಿ ಬಿರುಗಾಳಿ ಆಲಿಕಲ್ಲು ಸಹಿತ ಮಳೆ ಪ್ರಾರಂಭವಾಯಿತು, ಇದ್ದಕ್ಕಿದ್ದಂತೆ ಸುರಿದ ಮಳೆಯಿಂದ ಜನಜೀವನ ಅರ್ಥವಿಸ್ತವಾಯಿತು.
ಮೈಸೂರಿನ ಹಳೆ ವಡೆ ಬಿರುಗಾಳಿ ಎಂದಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ದೊರೆ ಬರುಳಿವೆ ಸದ್ಯ ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
ಮಾನಂದವಾಡಿ ರಸ್ತೆ ಸಿಲ್ಕ್ ಫ್ಯಾಕ್ಟರಿ ಬಳಿ ವಿದ್ಯುತ್ ಕಂಬಗಳು ಧರೆಗುರುಳಿವೆ,ಒಂದೆರೆಡು ವಿದ್ಯುತ್ ಕಂಬಗಳು ಖಾಸಗಿ ಕಾಲೇಜಿನ ಬಸ್ ಹಾಗೂ ನಗರ ಸಾರಿಗೆ ಬಸ್ ಮೇಲೆ ಬಿದ್ದಿವೆ.ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರಿ ಪೊಲೀಸರು ರಸ್ತೆ ಬಂದ್ ಮಾಡಿ,ಒನ್ ವೇ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮತ್ತೆ ಕೆಲವೆಡೆ ಬೃಹತ್ ಮರಗಳು ರಸ್ತೆಯಲ್ಲಿ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು.
ರಸ್ತೆಬದಿ ವ್ಯಾಪಾರ ಮಾಡುವವರು, ಕೆಲ ಕಾಲೇಜಿನ ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋದವರು ತೊಂದರೆ ಅನುಭವಿಸಿದರು.
ರಾಮಾನುಜ ರಸ್ತೆ ಮಳೆಯ ಕಾರಣ, ಕೆ ಎಸ್ ಆರ್ ಟಿ ಸಿ ಬಸ್ಸೊಂದು ರಸ್ತೆಯಲ್ಲಿ ಹೂತು ಕೊಂಡಿತ್ತು,ಇಲ್ಲಿ ಮೊದಲೇ ಸಂಪೂರ್ಣ ರಸ್ತೆ ಹಾಳಾಗಿದ್ದರಿಂದ,ಇಲ್ಲಿ ರಿಪೇರಿ ಕೆಲಸ ಮಾಡಿ ರಸ್ತೆಯನ್ನು ಹಾಗೆ ಬಿಟ್ಟಿದ್ದರಿಂದ ಹೀಗಾಗಿದೆ.