Mon. Dec 23rd, 2024

ನನ್ನನ್ನು ಕಿಂಗ್ ಎಂದು ಕರೆಯಬೇಡಿ : ಕೊಹ್ಲಿ

Virat Kohli
Share this with Friends

ಬೆಂಗಳೂರು : ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಅನ್​ಬಾಕ್ಸ್​ ಈವೆಂಟ್​ ಆಯೋಜನೆ ಮಾಡಿತ್ತು. ಈ ವೇಳೆ ವಿರಾಟ್​ ಕೊಹ್ಲಿ ಮಾಡಿದ ಕಾಮೆಂಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೇದಿಕೆ ಮೇಲೆ ಬಂದ ಕೊಹ್ಲಿಗೆ ಆ್ಯಂಕರ್​ ಪ್ರಶ್ನೆಯೊಂದನ್ನು ಕೇಳಿದರು. ರಾಜನಿಗೆ ಏನು ಅನಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೆಲ್ಲ ಕಿಂಗ್​ ಕೊಹ್ಲಿ.. ಕೊಹ್ಲಿ ಎಂದು ಕೂಗಿದರು. ಈ ಪ್ರತಿಕ್ರಿಯಿಸಿ ಕೊಹ್ಲಿ, ಎಲ್ಲ ಪ್ರೇಕ್ಷಕರು ಸುಮ್ಮನಿರಬೇಕು. ಇಲ್ಲಿಂದ ನಾವು ಬೇಗ ಚೆನ್ನೈಗೆ ಹೊರಡಬೇಕು. ನೀವೆಲ್ಲರೂ ನನ್ನನ್ನು ರಾಜ ಎಂದು ಕರೆಯುವಾಗ ನನಗೆ ತುಂಬಾ ಮುಜುಗರವಾಗುತ್ತದೆ. ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ ಎಂದರು. ಆದರೆ ತನ್ನನ್ನು ಕಿಂಗ್​ ಎಂದು ಕರೆಯಬಾರದು ಎಂದು ಕೊಹ್ಲಿ ಗಂಭೀರವಾಗಿ ಹೇಳಲಿಲ್ಲ. ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುವ ಉದ್ದೇಶದಿಂದ ಕೂಲ್ ಆಗಿ ನಗುತ್ತಲೇ ಹೇಳಿದರು.


Share this with Friends

Related Post