ಮೈಸೂರು, ಜೂ.5: ದೇಶದ ಎಲ್ಲ ಜಾತಿ, ಧರ್ಮ, ರಾಜಕೀಯ ಶಕ್ತಿಗಳು ಒಗ್ಗೂಡಿ ಷಡ್ಯಂತ್ರ ನಡೆಸಿದರೂ ವಿಶ್ವಗುರು ಮೋದಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ತಿಳಿಸಿದರು.
ವಿಶ್ವಗುರುವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಈ ಸಂಸತ್ ಚುನಾವಣೆಯಲ್ಲಿ ದೇಶದ ಮತದಾರರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಅವರು ಹೇಳಿದರು.
ನಗರದ ಜಗಮೋಹನ ಅರಮನೆಯ ಮುಂಭಾಗ 23ನೇ ವಾರ್ಡಿನ ಬಿಜೆಪಿ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಪೌರಕಾರ್ಮಿಕರ ಜೊತೆ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದರು.
ಈ ದೇಶದ ಮತದಾರರು ಕೊಟ್ಟ ತೀರ್ಪನ್ನು ಸ್ವಾಗತಿಸುತ್ತೇವೆ. ಮೂರನೇ ಬಾರಿಗೆ ಮತ್ತೊಮ್ಮೆ ಮೋದಿ ಅವರು ಈ ದೇಶದ ಪ್ರಧಾನಿ ಆಗಲಿದ್ದು, ದೇಶವನ್ನು ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ಒಂದನೇ ದೇಶವನ್ನಾಗಿ ಮಾಡುವುದು ಖಚಿತ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಮುಂದಿನ ಎಲ್ಲ ಚುನಾವಣೆಗಳಲ್ಲೂ ಮುಂದುವರಿಯಲಿದೆ. ಈ ನಾಡಿನ ಮತ ದಾರರು ಈ ಎರಡೂ ಪಕ್ಷಗಳ ಮೈತ್ರಿ ಯನ್ನು ಒಪ್ಪಿದ್ದು, ಅದರ ಪರಿಣಾಮವೇ ಈ ಚುನಾವಣೆಯ ಫಲಿತಾಂಶವಾಗಿದೆ ಎಂದು ವಿವರಿಸಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್ ಮಾತನಾಡಿ ಮೈಸೂರು ಕೊಡಗು ಲೋಕಸಭೆಯಲ್ಲಿ ಚಾಮರಾಜ ಕ್ಷೇತ್ರ ಅತಿ ಹೆಚ್ಚು ಲೀಡ್ ನೀಡಿರುವ ಕ್ಷೇತ್ರದ ಜನತೆಗೆ ವಿಶೇಷ ಅಭಿನಂದನೆಗಳು ಇದಕ್ಕೆ ಕಾರಣಕರ್ತರಾದ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ತಿಳಿಸಿದರು
ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್. ಆರ್, ವಾರ್ಡಿನ ಮುಖಂಡರಾದ ರಾಜೇಂದ್ರ, ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಪಾಪಣ್ಣ, ರಾಮು, ನಾರಾಯಣ್ ಶರ್ಮ, ಮಹೇಶ್, ಲಕ್ಷ್ಮಿ, ಶ್ರೀಲಕ್ಷ್ಮೀ, S.ರವಿಶಂಕರ್, ರಾಧಾಕೃಷ್ಣ ಶೆಟ್ಟಿ, ಪದ್ಮಾ, ಚರಣ್ ಶ್ರೇಷ್ಠಿ, ರಾಮಣ್ಣ, ಲೋಹಿತ್, ಕಲ್ಕೆರೆ ಹರೀಶ್, ವಿಜಯ್, ಪ್ರವೀಣ್, ದರ್ಶನ್, ಸಚಿನ್ ಎಂ.ಪಿ., ಕುಮಾರ್, ರವಿ, ಗೀತಾ, ಸ್ವಾಮಿ, ಭೂಷಿತ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.