Sat. Mar 7th, 2026

ವೋಟ್ ಚೋರಿ ಆರೋಪಕ್ಕೆ ಬಿಹಾರದ ಜನತೆಯಿಂದ ಉತ್ತರ: ಬಸವರಾಜ ಬೊಮ್ಮಾಯಿ

Share this with Friends

ಹಾವೇರಿ:ಕಾಂಗ್ರೆಸ್ ನವರು ವೋಟ್ ಚೋರಿ ವೋಟ್ ಚೋರಿ ಎಂದು ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಹೋಗಿದ್ದನ್ನು ಜನ ನೋಡಿದಾರೆ, ಅವರ ಅರಾಜಕತೆ ನೋಡಿದ್ದಾರೆ. ನಾಯಕರಿಗಿಂತ ಜನ ಬುದ್ದಿವಂತರಿದ್ದಾರೆ ಎಂದು ಬಿಹಾರ್ ಜನ ತೋರಿಸಿಕೊಟ್ಟಿದ್ದಾರೆ,ವೋಟ್ ಚೋರಿ ಆರೋಪಕ್ಕೆ ಉತ್ತರ ನೀಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಹಾರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಯವರ ಜನಪ್ರೀಯತೆ ಲೋಕಸಭಾ ಚುನಾವಣೆ ಬಳಿಕವೂ ದೃಡಪಟ್ಟಿದೆ. ಮಹಾರಾಷ್ಟ್ರ, ಹರಿಯಾಣ ಬಿಹಾರ ಎಲ್ಲಾ ಕಡೆ ಮೋದಿಯವರ ಜನಪ್ರೀಯತೆ ದೃಢಪಟ್ಟಿದೆ. ಕಾಂಗ್ರೆಸ್ ನವರು ಎಲ್ಲರೂ ತಮ್ಮ ಜೊತೆ ಇದ್ದಾರೆ ಅಂತ ತಿಳಿದುಕೊಂಡಿದ್ದರು, ಅದು ಸುಳ್ಳಾಗಿದೆ ಎಂದರು.

ಬಿಹಾರದಲ್ಲಿ ಬಹಳ ದೊಡ್ಡ ಜಾತಿ ರಾಜಕಾರಣ, ಸಮೀಕರಣದ ಬಗ್ಗೆ ಚರ್ಚೆ ಆಗುತ್ತಿತ್ತು. ಕಾಂಗ್ರೆಸ್ ನವರು ಎಲ್ಲರೂ ತಮ್ಮ ಜೊತೆ ಇದ್ದಾರೆ ಅಂತ ತಿಳಿದುಕೊಂಡಿದ್ದರು, ಅದು ಸುಳ್ಳಾಗಿದೆ. ಎಸ್ ಸಿ ಎಸ್ ಟಿ ಸಮುದಾಯದ  ಶೇ 80%  ಜನ ಬಿಜೆಪಿಗೆ ಮತ ಹಾಕಿದ್ದಾರೆ. ಹಿಂದುಳಿದ ವರ್ಗಗಳು, ಎಸ್ ಸಿ ಎಸ್ ಟಿ ಸಮಾಜ ನಮಗೆ ಬೆಂಬಲ ಕೊಟ್ಟಿದೆ. ಕಾಂಗ್ರೆಸ್ ನವರು ಅತಿಹೆಚ್ಚು ತುಷ್ಟೀಕರಣ  ಮಾಡಲು ಹೋದ ಪರಿಣಾಮ ಅಲ್ಪ ಸಂಖ್ಯಾತರ ತದ್ವಿರುದ್ಧವಾಗಿ ಮತಗಳು ಒಂದು ಗೂಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ಅಭಿವೃದ್ದಿ ದೃಷ್ಟಿಯಿಂದ  ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಜನರ ದೊಡ್ಡ ಆಶೀರ್ವಾದ ಆಗಿದೆ ಎಂದರು.

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಕುರಿತು ಮಾಡಿತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತಗಳ್ಳತನ- ಯಾರಿಂದ ಆಗಿದೆ? ಪುರಾವೆ ಏನಿದೆ? ಮತ ಕಳೆದುಕೊಂಡವರಿಂದಲೂ ಆರೋಪ ಇಲ್ಲ. ಕದ್ದವರು ಯಾರು ಅಂತ ಇಲ್ಲ. ರಾಹುಲ್ ಗಾಂಧಿ ಯವರೇ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ ಶುದ್ದೀಕರಣ ಆಗಬೇಕು ಅಂತ ಪತ್ರ ಬರೆದಿದ್ದಾರೆ. ಎಸ್ ಐಆರ್ ಆದರೆ ಶುದ್ದೀಕರಣ ಆಗುತ್ತದೆ ಎಂದರು.

ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿಗೆ ಯಾವ ರೀತಿಯ ಪಾಠವಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ರಾಜ್ಯದ ದುಷ್ಟ ಕೆಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ನಾವೆಲ್ಲ ಒಕ್ಕಟ್ಟಾಗಿ ಜನಪರವಾದ ಹೋರಾಟಗಳನ್ನು ಮಾಡಿದರೆ ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಖಂಡಿತ ಬಿಜೆಪಿ ಬಹುಮತ ಬರಲಿದೆ ಎಂದರು.


Share this with Friends

Related Post