Sun. Apr 20th, 2025

ಮತದಾನ ಜಾಗೃತಿ : ವಿಶೇಷ ಚೇತನರಿಂದ ಬೈಕ್ ರ್‍ಯಾಲಿ

Share this with Friends

ಮೈಸೂರು ಏ.18: ಮತದಾನ ಜಾಗೃತಿಗಾಗಿ ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಿಶೇಷಚೇತನರ ಬೈಕ್ ರ್‍ಯಾಲಿ ಆಯೋಜಿಸಲಾಗುತ್ತು.

ಈ ವಿಶೇಷಚೇತನರ ಬೈಕ್ ರ್‍ಯಾಲಿಗೆ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ.ಸುನೀಲ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಚಾಲನೆ ನೀಡಿದರು.

ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಆವರಣದಿಂದ ಬೆಟ್ಟದಪುರ ವೃತ್ತದವರೆಗೆ ವಿಶೇಷಚೇತನರು ನಮ್ಮ ಮತ, ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ ಎಂಬ ಘೋಷಣೆಗಳ ಪ್ರದರ್ಶನದೊಂದಿಗೆ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಟಿಪಿಒ ವಸಂತಲಕ್ಷ್ಮೀ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಜಿ.ಸಿ.ಮಹದೇವ್, ಸಿಡಿಪಿಯು ಮಮತಾ, ವಿಶೇಷಚೇತನರ ನೋಡಲ್ ಅಧಿಕಾರಿ ಸುನೀತ ಹಾಜರಿದ್ದರು.


Share this with Friends

Related Post