Sat. Jan 4th, 2025

ಮತದಾನ ಜಾಗೃತಿ ಹಸ್ತಾಕ್ಷರ ಸಂಗ್ರಹಣಾ ಅಭಿಯಾನ

Share this with Friends

ಮೈಸೂರು, ಏ.13: ಲೋಕಸಭಾ ಚುನಾವಣೆಯ ಪ್ರಯುಕ್ತ ಹಸ್ತಾಕ್ಷರ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಸ್ವೀಪ್ ಕಾರ್ಯಕ್ರಮದಡಿ ಮತದಾನ ಮಾಡುವಂತೆ ಪ್ರೇರೆಪಿಸಲು ನಗರ ಪಾಲುಕೆ ವಲಯ ಕಛೇರಿಯ ಸ್ವಾಗತ ಕಮಾನು, ವಲಯ ಕಛೇರಿಯ ಮುಂಭಾಗದಲ್ಲಿ ಮತದಾನ ಕುರಿತು ಗೋಡೆಬರಹ, ಮತದಾನದ ಸೆಲ್ಫಿ ಕೌಂಟರ್ ಹಾಗೂ ನಾನು ಮತದಾನ ಮಾಡುತ್ತೇನೆ ಎಂಬ ಹಸ್ತಾಕ್ಷರ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವೆಂಕಟರಾಜ್ ಅವರು ಉದ್ಘಾಟಿಸಿ ಸಾರ್ವಜನಿಕರಿಗೆ ಏಪ್ರಿಲ್ 26 ರಂದು ತಪ್ಪದೆ ಮತದಾನ ಮಾಡಲು ಮನವಿ ಮಾಡಿದರು.

ವಲಯ ಆಯುಕ್ತರಾದ ವಾಣಿ ವಿ ಆಳ್ವ, ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಪರಿಸರ ಅಭಿಯಂತರರಾದ ‌ಮೈತ್ರಿ, ಸಹಾಯಕ ಕಂದಾಯಾಧಿಕಾರಿ ಸಿದ್ದರಾಜು ಮತ್ತು ಅಶೋಕ್, ಕಿರಿಯ ಅಭಿಯಂತರ ಕೃಷ್ಣಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಕರು, ಕಂದಾಯ ಪರಿಶೀಲಕರು ಹಾಜರಿದ್ದು.


Share this with Friends

Related Post