Mon. Dec 23rd, 2024

ನೀರು ಜೀವ ಸಂಕುಲಕ್ಕೆ ಆಧಾರ : ನಾರಾಯಣ ಗೌಡ

Share this with Friends

ಮೈಸೂರು,ಮಾ.22: ಜೀವ ಜಲ ನೀರನ್ನು ಪ್ರಕೃತಿಯು ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳಿಗೆ ಇತ್ತ ವರ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು.

ನೀರು ಸೃಷ್ಟಿಸಲಾದ ನೈಸರ್ಗಿಕ ಸಂಪತ್ತು, ನೀರಿಗೆ ನೀರೇ ಪರ್ಯಾಯ, ಮಳೆ ಇದಕ್ಕೆ ಮೂಲಾಧಾರ, ಅಮೃತ ಸ್ವರೂಪವಾದ ನೀರು ಜೀವ ಸಂಕುಲಕ್ಕೆ ಆಧಾರ ತಿಳಿಸಿದರು.

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಆವರಣದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆ ವತಿಯಿಂದ ವಿಶ್ವ ಜಲ ದಿನ ಅಂಗವಾಗಿ
ಹಮ್ಮಿಕೊಂಡಿದ್ದ‌ ಕಾರ್ಯಕ್ರಮ ದಲ್ಲಿ‌ ಅವರು ಮಾತನಾಡಿದರು.

ನೀರಿನ ಮಹತ್ವದ ಜಾಗೃತಿಯುಳ್ಳ ಕರಪತ್ರವನ್ನು ಅಂಟಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಹೋಟೆಲ್ ಗಳಲ್ಲಿ ಗ್ರಾಹಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಸಂರಕ್ಷಿಸಬೇಕೆಂದು ಮನವಿ ಮಾಡಿದರು.

ನೀರಿನ ಮಹತ್ವ ಮೂಡಿಸಬೇಕಾದದ್ದು ಹೋಟೆಲ್ ಗಳ ಹೊಣೆಗಾರಿಕೆಯೂ ಹೌದು, ದರ ಪಟ್ಟಿಯನ್ನು ಪ್ರಕಟಿಸಿದಂತೆ ನೀರಿನ ಮಹತ್ವ ಬಗೆ ಹರಿವು ಮೂಡಿಸುವತ್ತ ಹೋಟೆಲ್ ಗಳು ಹೆಜ್ಜೆ ಇಡಬೇಕಾಗಿದೆ, ನೀರನ್ನು ಮಿತವಾಗಿ ಬಳಸಿ ಎಂಬ ಜಾಗೃತಿಯ ಬರಹಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸುವಂತೆ ಪ್ರಕಟಿಸುವುದು ಒಳಿತು‌ ಎಂದು ನಾರಾಯಣ ಗೌಡ ಹೇಳಿದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಪ್ರಸಾದ್ ಜೇಟ್ಟಿ, ಸುರೇಶ್ ಗೋಲ್ಡ್, ಸಂದೀಪ್, ಧರ್ಮೇಂದ್ರ, ನಾಗೇಶ್, ಶ್ರೀಕಾಂತ್ ಕಶ್ಯಪ್, ದಯಾನಂದ್ ಮತ್ತಿತರರು ಹಾಜರಿದ್ದರು.


Share this with Friends

Related Post